ಕೊಲ್ಲಮೊಗ್ರ:ಕೊಲ್ಲಮೊಗ್ರ ಕೆ ವಿ ಜಿ ಪ್ರೌಢಶಾಲೆಯಲ್ಲಿ ಬೆಂಕಿ ಸಹಿತ ಹಾಗೂ ಬೆಂಕಿ ರಹಿತ ಅಡುಗೆ ತಯಾರಿ ಕಾರ್ಯಕ್ರಮ
ನಡೆಯಿತು. ಸ.ಹಿ.ಪ್ರಾ.ಶಾಲೆ ಬಂಗ್ಲೆಗುಡ್ಡೆಯ ವಿಧ್ಯಾರ್ಥಿಗಳು ಜೊತೆ ಸೇರಿಸಿ ಸ್ಕೌಟ್ ಹಾಗೂ ಗೈಡ್ ವಿಧ್ಯಾರ್ಥಿಗಳಿಗೆ ಬೆಂಕಿ ಸಹಿತ ಹಾಗೂ ಬೆಂಕಿ ರಹಿತ ಅಡುಗೆ ತಯಾರಿ ಕಾರ್ಯಕ್ರಮ
ನಡೆಸಲಾಯಿತು. 24 ಸ್ಕೌಟ್ ವಿಧ್ಯಾರ್ಥಿಗಳು ಮತ್ತು 8 ಗೈಡ್ಸ್ ವಿಧ್ಯಾರ್ಥಿಗಳು ಶುಚಿ ರುಚಿಯಾದ ಸುಮಾರು ಐವತ್ತಕ್ಕಿಂತಲೂ ಮೇಲ್ಪಟ್ಟು ವೈವಿಧ್ಯಮಯ ಅಡುಗೆ ಪಾಕಗಳನ್ನು ತಯಾರಿಸಲಾಯಿತು.
ಈ ಸಂದರ್ಭದಲ್ಲಿ ಕೆ ವಿ ಜಿ ಅನುದಾನಿತ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಸುರೇಶ್ ಪಿ ಕೆ, ಶಿಕ್ಷಕರಾದ ಬಾಲಕೃಷ್ಣ ಗೌಡ, ಸಂಧ್ಯಾರಾಣಿ, ಜಯಶ್ರೀ, ರಾಜೇಶ್, ಚಂದ್ರು, ಲೋಕನಾಥ ಗೌಡ, ಬಂಗ್ಲೆಗುಡ್ಡೆಯ ಮುಖ್ಯೋಪಾಧ್ಯಾಯಿನಿಯಾದ ಕಮಲ,ಲೇಡಿ ಸ್ಕೌಟ್ ಮಾಸ್ಟರ್ ರೇಷ್ಮಾ, ದಳ ನಾಯಕಿಯಾದ ವಿದ್ಯಾ, ಹಾಗೂ ಶಿಕ್ಷಕರಾದ ರೋಹಿತಾಕ್ಷಿ,ಲೋಕೇಶ್, ಪರಶಿವ ಮೂರ್ತಿ, ಹರ್ಷಿತ, ಸೌಮ್ಯ ಹಾಗೂ ಕೆ ವಿ ಜಿ ಶಾಲೆಯ ಅಕ್ಷರ ದಾಸೋಹ ಸಿಬ್ಬಂದಿಗಳಾದ ಲೀಲಾವತಿ ಶಾರದಾ, ಪಂಚಾಯತ್ ಸಿಬ್ಬಂದಿಗಳಾದ ಮೋಹನ್, ವಸಂತ್ ಹಾಗೂ ಆಶಿಶ್ ಉಪಸ್ಥಿತರಿದ್ದರು.








