ಕೊಲ್ಲಮೊಗ್ರ: ಸುಳ್ಯ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಕೊಲ್ಲಮೊಗ್ರು ಗಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕಿ ಭಾಗೀರಥಿ ಮುರುಳ್ಯ ಗುದ್ದಲಿಪೂಜೆ ನೆರವೇರಿಸಿದರು.ಕೊಲ್ಲಮೊಗ್ರ-ಆಲದಮರ ಬಳಿ ಮುಖ್ಯ ರಸ್ತೆಗೆ ನೂತನ ಸೇತುವೆಗೆ – 1ಕೋಟಿ,
ಕಲ್ಮಕಾರು ರಸ್ತೆಯ ಗಡಿಕಲ್ಲು ಬಳಿ ತಡೆಗೋಡೆಗೆ
25ಲಕ್ಷ, ಕೊಲ್ಲಮೊಗ್ರ ಗ್ರಾಮದ ಕುಂಟುಕಾಪು ರಸ್ತೆಗೆ 10ಲಕ್ಷ ಕೊಲ್ಲಮೊಗ್ರ ಗ್ರಾಮದ ಮಲ್ಲಾಜೆ-ಕೊಳೆಕ್ಕಾನ -20ಲಕ್ಷ ಕೊಲ್ಲಮೊಗ್ರ ಗ್ರಾಮದ ಕಡಂಬಳ- 5ಲಕ್ಷ ಕೊಲ್ಲಮೊಗ್ರ ಗ್ರಾಮದ ಬೆಂಡೋಡಿಯಲ್ಲಿ ನೂತನ ಕಟ್ಟಡಕ್ಕೆ- 20ಲಕ್ಷ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ಬೆಂಡೋಡಿ ಕಿರಿಯ ಪ್ರಾಥಮಿಕ ಶಾಲೆಯ ಶೌಚಾಲಯ 7ಲಕ್ಷ
ಬೆಂಡೋಡಿ ಪರಿಶಿಷ್ಟ ಜಾತಿ ಕಾಲೋನಿಯ ಸಾರ್ವಜನಿಕ ಶೌಚಾಲಯ 5ಲಕ್ಷ ರೂಗಳ ಕಾಮಗಾರಿಗಳನ್ನು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮೋಹಿನಿ ಕಟ್ಟ, ಉಪಾಧ್ಯಕ್ಷ ಮಾಧವ ಚಾಂತಾಳ, ಬಿಜೆಪಿ ಸುಳ್ಯ ಮಂಡಲ ಸಮಿತಿಯ ಅಧ್ಯಕ್ಷ ವೆಂಕಟ್ ವಳಲಂಬೆ, ಕೇಂದ್ರಿಯ ರಬ್ಬರ್ ಬೋರ್ಡ್ ನಿರ್ದೇಶಕ ಕೇಶವ ಭಟ್ ಮುಳಿಯ, ಬಿಜೆಪಿ ಗುತ್ತಿಗಾರು ಮಹಾ ಶಕ್ತಿ ಕೇಂದ್ರ ಅಧ್ಯಕ್ಷ ಕೃಷ್ಣಯ್ಯ ಮೂಲೆತೋಟ, ಪಕ್ಷದ ಪ್ರಮುಖರಾದ, ಜಯರಾಮ ಗೊಳಿಯಡಿ
ಹೂವಪ್ಪ ಸಂಪ್ಯಾಡಿ,ಹರೀಶ ಬೈಲಡ್ಕ,ಡ್ಯಾನಿ ಯಾಲದಾಳು, ಗಣೇಶ್ ಭಟ್ ಇಡ್ಡಿಯಡ್ಕ, ಕಮಲಾಕ್ಷ ಮುಳ್ಳುಬಾಗಿಲು
ಮತ್ತಿತರರು ಉಪಸ್ಥಿತರಿದ್ದರು.