ಪೆರಾಜೆ: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಂಪಾಜೆ ಹೋಬಳಿ ಘಟಕ , ದಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ಘಟಕ ಹಾಗೂ ಸಂಧ್ಯಾ ರಶ್ಮಿ ಸಾಹಿತ್ಯ ಸಂಘ ಸುಳ್ಯ ಇದರ ಸಹಯೋಗದಲ್ಲಿ ಕೋಡಿ ಕುಶಾಲಪ್ಪ ಗೌಡ ಬದುಕು ಬರಹ ಒಂದು ನೆನಪು ಕಾರ್ಯ ಕ್ರಮ ಜ್ಯೋತಿ ಪ್ರೌಢಶಾಲೆ ಪೆರಾಜೆ ಇಲ್ಲಿ ನಡೆಯಿತು. ಕಾರ್ಯಕ್ರಮವನ್ನು ಜ್ಯೋತಿ ಪ್ರೌಢಶಾಲೆಯ ಅಧ್ಯಕ್ಷರಾದ ಡಾ. ಜ್ಞಾನೇಶ್ ಎನ್.ಎ.ಉದ್ಘಾಟಿಸಿ ಕೊಡಿಯವರ
ಹಾಗೂ ಪೆರಾಜೆಯ ಅವಿನಾಭಾವ ಸಂಬಂಧವನ್ನು ನೆನಪಿಸಿದರು. ಮುಖ್ಯ ಭಾಷಣಕಾರರಾಗಿ ಸಾಹಿತಿ ಲೀಲಾ ದಾಮೋದರ್ ಇವರು ಕೋಡಿಯವರ ಕೃತಿಗಳ ಬಗ್ಗೆ ಪರಿಚಯಿಸಿ ಅವರ ಸಾಹಿತ್ಯದ ಮಹತ್ವವನ್ನು ನೆನಪಿಸಿದರು. ಕೋಡಿ ಕುಶಾಲಪ್ಪ ಅವರ ಪುತ್ರಿ ಮಾಲಿನಿ ಕೆ ಎಸ್ ಇವರು ಕೊಡಿಯವರ ಬದುಕು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಒಂದು ಆದರ್ಶವಾಗಿದೆ. ಹಾಗೂವಿದ್ಯಾರ್ಥಿಗಳು ಸಾಹಿತ್ಯದ ಆಸಕ್ತಿಯನ್ನು ಬೆಳೆಸಿಕೊಳ್ಳಲು ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪೇರಾಲ್ , ಪ್ರೊ. ಸಂಜೀವ ಕುದ್ಪಾಜೆ, ಲೋಕನಾಥ್ ಅಮೆಚೂರ್ ಹಾಗೂ ಶಾಲಾ ಮುಖ್ಯ ಶಿಕ್ಷಕ ನಾಗರಾಜ್ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಸಂಪಾಜೆ ಹೋಬಳಿ ಘಟಕದ ಅಧ್ಯಕ್ಷ ಗೋಪಾಲ್ ಪೆರಾಜೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಡಾ. ರಂಗಯ್ಯ, ಲಿಂಗಪ್ಪ ಗೌಡ, ಕೇಶವ ಸಿ ಎ, ಬಾರಿಯಂಡ ಜೋಯಪ್ಪ, ಲತಾಶ್ರಿ ಸುಪ್ರೀತ್ ಮೋಂಟಡ್ಕ, ಪದ್ಮಯ್ಯ ಕುಂಬಳಚೇರಿ, ವಿನೋದ್ ಮೂಡಗದ್ದೆ, ಕೋಡಿ ಭಾಸ್ಕರ, ರಾಮಚಂದ್ರ ಎನ್ ಜಿ, ಪ್ರೊ ದಾಮೋದರ ಗೌಡ, ಸಂಗೀತಾ ರವಿರಾಜ್ ಹೊಸೂರ್, ಗಣಪತಿ ಕುಂಬಳಚೆರಿ, ದಯಾನಂದ, ತೀರ್ಥರಾಮ ಹೊದ್ದೆಟ್ಟಿ,ವವೇಣುಗೋಪಾಲ,ವಿಧಾಕುಮಾರಿ, ಜೀತೆಂದ್ರ ಎನ್ ಎ, ನಾಗೇಶ್ ಕುಂದಲಪ್ಪಾಡಿ, ಎಸಿ ಹೊನ್ನಪ್ಪ, ಜಗದೀಶ್ ಕುಂಬಲಚೆರಿ, ಇವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಚೆಂಬು ಸಾಹಿತ್ಯ ವೇದಿಕೆ ವತಿಯಿಂದ ಆಯೋಜಿಸಿದ ಎಂ ಜಿ ಕಾವೇರಮ್ಮ ಅರೆಭಾಷೆ ಕವನ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ರಂಜಿತ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.