ಸುಳ್ಯ:ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕು ಘಟಕದ ವಾರ್ಷಿಕ ಮಹಾಸಭೆಯು ಸುಳ್ಯದ ಶ್ರೀ ಹರಿ ಕಾಂಪ್ಲೆಕ್ಸ್ ನ ಸಭಾಭವನದಲ್ಲಿ ತಾಲೂಕು ಘಟಕದ ಅಧ್ಯಕ್ಷ ಈಶ್ವರ ವಾರಣಾಸಿ ಅಧ್ಯಕ್ಷತೆಯಲ್ಲಿ ನಡೆಯಿತು.ಕರ್ನಾಟಕ ಜರ್ನಲಿಸ್ಟ್ ಯೂನಿಯನ್ನ ಜಿಲ್ಲಾ ಗೌರವಾಧ್ಯಕ್ಷ ಹರೀಶ್ ಬಂಟ್ವಾಳ್, ಕೆಜೆಯು ಸುಳ್ಯ ತಾ.ಘಟಕದ ಗೌರವಾಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ, ಕಾರ್ಯದರ್ಶಿ ಜಯಶ್ರೀ ಕೊಯಿಂಗೋಡಿ, ಖಜಾಂಜಿ ವಿನಯ್ ಜಾಲ್ಸೂರು ವೇದಿಕೆಯಲ್ಲಿ
ಉಪಸ್ಥಿತರಿದ್ದರು. ಕಾರ್ಯದರ್ಶಿ ಜಯಶ್ರೀ ಕೊಯಿಂಗೋಡಿ ವರದಿ ವಾಚಿಸಿದರು. ಕೋಶಾಧಿಕಾರಿ ವಿನಯ್ ಜಾಲ್ಸೂರು ಲೆಕ್ಕಪತ್ರ ಮಂಡಿಸಿದರು.
ಈ ಸಂದರ್ಭದಲ್ಲಿ 2024-25 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿ ಈಶ್ವರ ವಾರಣಾಸಿ, ಅಧ್ಯಕ್ಷರಾಗಿ ಜಯಶ್ರೀ ಕೊಯಿಂಗೋಡಿ, ಕಾರ್ಯದರ್ಶಿಯಾಗಿ ಗಣೇಶ್ ಕುಕ್ಕುದಡಿ, ಕೋಶಾಧಿಕಾರಿಯಾಗಿ ಕುಶಾಂತ್ ಕೊರತ್ಯಡ್ಕ, ಉಪಾಧ್ಯಕ್ಷರಾಗಿ ಪೂಜಾಶ್ರೀ ಪೈಚಾರ್, ಶ್ರೀಜಿತ್ ಸಂಪಾಜೆ, ಜತೆ ಕಾರ್ಯದರ್ಶಿ ಅನಿಲ್ ಕಳಂಜ, ಸಂಘಟನಾ ಕಾರ್ಯದರ್ಶಿ ರಮೇಶ್ ನೀರಬಿದಿರೆ, ಕ್ರೀಡಾ ಕಾರ್ಯದರ್ಶಿ ರಕ್ಷಿತ್ ಆನೆಕಾರ, ಸಾಂಸ್ಕೃತಿಕ ಕಾರ್ಯದರ್ಶಿ ರೇಖಾ ಸುಭಾಶ್ ರವರನ್ನು ಹಾಗೂಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಯಶ್ವಿತ್ ಕಾಳಂಮನೆ, ಶ್ರೀಧರ್ ಕಜೆಗದ್ದೆ, ಶಿವಪ್ರಸಾದ್ ಆಲೆಟ್ಟಿ, ಶಿವರಾಮ ಕಜೆಮೂಲೆ, ಭಾಗೀಶ್ ಕೆ.ಟಿ. ಉಮೇಶ್ ಮಣಿಕ್ಕರ, ಶರೀಫ್ ಜಟ್ಟಿಪಳ್ಳ, ಗಾಯತ್ರಿ ಪ್ರಶಾಂತ್ ಪೆರಾಜೆ, ವಿನಯ್ ಜಾಲ್ಸೂರು, ರಶೀದ್ ಬೆಳ್ಳಾರೆ, ಸಂಕಪ್ಪ ಸಾಲ್ಯಾನ್, ಮಧು ಪಂಜ, ಶ್ರೀಧಾಮ ಅಡ್ಕಾರ್, ಯತೀಶ್ ಕದ್ರ, ಅನಿಲ್ ಸಂಪ, ಕೌಶಿಕ್ ಬಳ್ಳಕ್ಕ, ಮಂಜುನಾಥ ಪೈಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷ ಈಶ್ವರ ವಾರಣಾಸಿ ಸ್ವಾಗತಿಸಿ, ಕಾರ್ಯದರ್ಶಿ ಗಣೇಶ್ ಕುಕ್ಕುದಡಿ ವಂದಿಸಿದರು.