ಸುಳ್ಯ:ಭಯೋತ್ಪಾದನೆ ವಿರುದ್ಧ ಭಾರತೀಯ ಸೇನೆಗೆ ಪೂರ್ಣ ಜಯಕ್ಕೆ ಪ್ರಾರ್ಥಿಸಿ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಆಶ್ರಯದಲ್ಲಿ ಸುಳ್ಯದ ಶಿವಕೃಪಾ ಕಲಾಮಂದಿರದಲ್ಲಿ ನಡೆಯುತ್ತಿರುವ ಶ್ರೀ ಕೇಶವಕೃಪಾ ವೇದ-ಯೋಗ-ಕಲಾ ಶಿಬಿರದಲ್ಲಿ ಸಹಸ್ರಾಧಿಕ ಶ್ರೀ ದುರ್ಗಾಸೂಕ್ತ ಜಪ ನಡೆಸಲಾಯಿತು.ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕಾರವಾಗಿ
ಜಾಗತಿಕ ಪಿಡುಗಾಗಿರುವ ಭಯೋತ್ಪಾದನೆಯ ನಿರ್ಮೂಲನೆಯ ಪಣ ತೊಟ್ಟು ಸಮರಕ್ಕೆ ದಿಟ್ಟ ಮುಂದಡಿ ಇಟ್ಟ ಕೇಂದ್ರ ಸರಕಾರ ಹಾಗೂ ಭಾರತೀಯ ಸೇನೆಗೆ ವಿಜಯಶ್ರೀ ಹಾಗೂ ಭಾರತೀಯ ಸೈನಿಕರ ಸುಕ್ಷೇಮ,ಭಯೋತ್ಪಾದನೆಯ ನಿರ್ಮೂಲಕ್ಕಾಗಿ ದುರ್ಗಾಸೂಕ್ತ ಜಪ ನಡೆಸಲಾಯಿತು.
ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಶಿಬಿರದ ಪ್ರಧಾನಾಚಾರ್ಯರಾದ ಪುರೋಹಿತ ನಾಗರಾಜ ಭಟ್ ಅವರು ಶಿಬಿರದ ಎಲ್ಲಾ ವಿದ್ಯಾರ್ಥಿಗಳಿಗೆ ಸಂಕಲ್ಪ ವಾಕ್ಯಗಳನ್ನು ಬೋಧಿಸಿ,ಇನ್ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ವೃಂದದವರು ಸೇರಿ ಸಹಸ್ರಾಧಿಕ ಸಂಖ್ಯೆಯಲ್ಲಿ ಶ್ರೀ ದುರ್ಗಾಸೂಕ್ತ ಜಪವನ್ನು ನಡೆಸಿ,ದುರ್ಗಾಮಾತೆಯ ಚರಣಕ್ಕೆ ಸಮರ್ಪಿಸಿ ಭಾರತೀಯ ಸೇನೆಯ ಯಶಸ್ಸು ಹಾಗೂ ಕ್ಷೇಮಕ್ಕಾಗಿ ಪ್ರಾರ್ಥಿಸಲಾಯಿತು.
ಈ ಸಂದರ್ಭದಲ್ಲಿ ಪ್ರತಿಷ್ಠಾನದ ಸಂಚಾಲಕಿ ಶ್ರೀದೇವಿ ನಾಗರಾಜ ಭಟ್,ಶಿಬಿರದ ಅಧ್ಯಾಪಕರಾದ ಸುದರ್ಶನ ಭಟ್ ಉಜಿರೆ, ಗೋಪಾಲಕೃಷ್ಣ ಭಟ್ ಕನ್ಯಾನ, ಪುರುಷೋತ್ತಮ ಭಟ್, ದುರ್ಗಾಪ್ರಸಾದ ಶರ್ಮ, ಋತುರಾಜ್ ಪಾಂಡೆ, ಅಭಿರಾಮ ಶರ್ಮ ಸರಳಿಕುಂಜ,ಶಿಬಿರದ ಪ್ರಬಂಧಕಿ ಯಶಸ್ವಿ ಭಟ್ ಉಪಸ್ಥಿತರಿದ್ದರು.





