ಕಾಸರಗೋಡು:ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಕರ್ನಾಟಕ ಮುಖ್ರಮಂತ್ರಿ ಸಿದ್ಧರಾಮಯ್ಯ ಅವರು ಯುಡಿಎಫ್ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ನಡೆಸಿದರು.ಮಂಜೇಶ್ವರ ಹಾಗೂ ಮುಳ್ಳೆರಿಯಾದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಭಾಷಣ ಮಾಡಿ ಯುಡಿಎಫ್ ಅಭ್ಯರ್ಥಿಗಳ ಪರ ಮತಯಾಚಿಸಿದರು.ಗಡಿನಾಡ ಕನ್ನಡಿಗರು
ಸಾಮರಸ್ಯತೆಯ ಬದುಕಿಗಾಗಿ ಮತ್ತು ಅಭಿವೃದ್ಧಿಗಾಗಿ ಯುಡಿಎಫ್ ಬೆಂಬಲಿಸಬೇಕೆಂದು ಸಿಎಂ ಕರೆ ನೀಡಿದರು.ಮಹಿಳೆಯರಿಗೆ ಉಚಿತ ಸಾರಿಗೆ ಪ್ರಯಾಣ, ಉಚಿತ ವಿದ್ಯುತ್ ಸೇರಿ ಐದು ಗ್ಯಾರಂಟಿ ಯೋಜನೆಗಳನ್ನು ಕರ್ನಾಟಕದಲ್ಲಿ ಘೋಷಿಸಿದಾಗ ಬಿಜೆಪಿ, ಎಡಪಕ್ಷಗಳು ಟೀಕಿಸಿ ಇದು ಸಾಧ್ಯವೇ ಇಲ್ಲ ಎಂದು ಹೇಳಿತ್ತು. ಆದರೆ ನಾವು ನುಡಿದಂತೆ ನಡೆದಿದ್ದೇವೆ. 3 ವರ್ಷದಿಂದ ಯಶಸ್ವಿಯಾಗಿ ಅನುಷ್ಠಾನ ಮಾಡಿದ್ದೇವೆ. ಕೇರಳದಲ್ಲೂ ಇಂದಿರಾ ಗ್ಯಾರಂಟಿ ಘೋಷಿಸಿದ್ದೇವೆ. ಇದು ಸಾಧ್ಯವಾಗದ ಯೋಜನೆ ಅಲ್ಲ, ಯುಡಿಎಫ್ ಬಂದರೆ ಅನುಷ್ಠಾನ ಮಾಡಿಯೇ ಮಾಡುತ್ತೇವೆ ಎಂದರು.

ಎಲ್ಡಿಎಫ್ ಸರಕಾರ ಕಳೆದ 10 ವರ್ಷದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಕೇರಳವನ್ನು ಹಿಂದಕ್ಕೆ ತಳ್ಳಿದೆ, ಇಲ್ಲಿ ನಿರುದ್ಯೋಗ, ಹಣದುಬ್ಬರ, ಹೆಚ್ಚಾಗಿದೆ. ನಿರುದ್ಯೋಗದಿಂದ, ಹೊಸ ಉದ್ಯೋಗ ಸೃಷ್ಟಿ ಆಗದ ಕಾರಣ ಯುವಜನತೆ ಬೇರೆಡೆಗೆ ಉದ್ಯೋಗ ಅರಸಿ ಹೋಗಬೇಕಾದ ಸ್ಥಿತಿ ಇದೆ, ಕೇರಳದಲ್ಲಿ ಪ್ರತಿಭಾ ಪಲಾಯನ ನಡೆಯುತಿದೆ ಎಂದು ಟೀಕಿಸಿದರು.
ಹೊಸಂಗಡಿ ಸಮೀಪದ ವರ್ಕಾಡಿಯ ಧರ್ಮನಗರ,
ಮುಳ್ಳೇರಿಯಾದಲ್ಲಿ ನಡೆದ ಸಮಾರಂಭದಲ್ಲಿ ಕಿಕ್ಕಿರಿದ ಸಂಖ್ಯೆಯಲ್ಲಿ ಕಾರ್ಯಕರ್ತರು, ನಾಗರಿಕರು ಪಾಲ್ಗೋಂಡಿದ್ದರು.
ಕರ್ನಾಟಕ ಸಚಿವ ಬೋಸರಾಜ್, ಸಂಸದ ರಾಜಮೋಹನ್ ಉಣ್ಣಿತ್ತಾನ್, ವಿನಯಕುಮಾರ್ ಸೊರಕೆ, ಮಾಜಿ ಸಚಿವ ರಮಾನಾಥ ರೖ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೖ, ಕಾಸರಗೋಡು ಡಿಸಿಸಿ ಅಧ್ಯಕ್ಷ ಫೖಝಲ್, ಯುಡಿಎಫ್ ಅಭ್ಯರ್ಥಿಗಳು, ಮುಖಂಡರು ಉಪಸ್ಥಿತರಿದ್ದರು.









