ಅಜ್ಜಾವರ: ಚೈತ್ರ ಯುವತಿ ಮಂಡಲ ಅಜ್ಜಾವರ ಹಾಗೂ ಪ್ರತಾಪ ಯುವಕ ಮಂಡಲ ಅಜ್ಜಾವರ ಇದರ ವತಿಯಿಂದ ವಿಶಿಷ್ಟ ಪರ್ವ ದಿನವಾದ ಕೆಡ್ಡಸವನ್ನು ಮಾವಿನಪಳ್ಳದ ಜಾನಕಿಯವರ ನಿವಾಸದಲ್ಲಿ ಆಚರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಚೈತ್ರ ಯುವತಿ ಮಂಡಲದ ಅಧ್ಯಕ್ಷೆ ಶಶ್ಮಿ ಭಟ್ ಅಜ್ಜಾವರ ವಹಿಸಿದ್ದರು. ಸುಳ್ಯ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ ಕೆಡ್ಡಸ ಆಚರಣೆಯ ಮಹತ್ವವನ್ನು ತಿಳಿಸಿದರು. ಪ್ರತಾಪ ಯುವಕ ಮಂಡಲದ ಅಧ್ಯಕ್ಷ ಗುರುರಾಜ್ ಅಜ್ಜಾವರ ಶುಭ ಹಾರೈಸಿದರು.

ಏಕದಂತ ಸಮಿತಿ ಮಾವಿನಪಳ್ಳ ಇದರ ಉಪಾಧ್ಯಕ್ಷೆ ಅನಿತಾ, ಕಾರ್ಯದರ್ಶಿ ಗೀತಾ,ಮಹಮ್ಮಾಯಿ ದೇವಿ ದೇವಸ್ಥಾನದ ಮೊಕ್ತೆಸರ ಕುಶಲ, ಐತೆ,ಯುವತಿ ಮಂಡಲ ಉಪಾಧ್ಯಕ್ಷೆ ಮಾಲತಿ ಸೂರ್ಯ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಕೆಡ್ಡಸದ ವಿಶೇಷ ತಿನಿಸು ನನ್ನೆರಿಯನ್ನು ಎಲ್ಲರಿಗೂ ಹಂಚಲಾಯಿತು.ವಿನೋದ್ ಎಂ. ಸಿ ಮಾವಿನಪಳ್ಳ ಸ್ವಾಗತಿಸಿ, ನವೀನ್ ಕುಕ್ಲುಮಜಲು ವಂದಿಸಿದರು.







