ಸುಳ್ಯ: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಸಂಭ್ರಮಾಚರಣೆ ಹಾಗೂ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸಾಹಿತ್ಯ ಸಂಭ್ರಮ-೨೦೨೩ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ನೆನಪು ಕಾರ್ಯಕ್ರಮ ನವೆಂಬರ್ 1ರಿಂದ ನವೆಂಬರ್ 7ರ ವರೆಗೆ ಆಚರಿಸಲಾಗುವುದು ಎಂದು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಚಂದ್ರಶೇಖರ ಪೇರಾಲು ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ 9 ವರ್ಷಗಳಿಂದ ರಾಜ್ಯೋತ್ಸವ ಸಂದರ್ಭದಲ್ಲಿ 7 ದಿನಗಳ ಸಾಹಿತ್ಯ ಸಂಭ್ರಮವನ್ನು
ಆಚರಿಸಿ ಕೊಂಡು ಬರಲಾಗುತಿದೆ. ಈ ವರ್ಷದ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಉದ್ಘಾಟನೆ ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ದ. ರಾ. ಬೇಂದ್ರೆ ನೆನಪು ಹಾಗೂ ಗಾಯನ ಕಾರ್ಯಕ್ರಮ ನ.1 ರಂದು ಸರಕಾರಿ ಪ್ರೌಢಶಾಲೆ ಅಜ್ಜಾವರ ಇದರ ಸಹಯೋಗದಲ್ಲಿ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಪೇರಾಲು ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.ಆರಂಭದಲ್ಲಿ ಕನ್ನಡ ತಾಯಿ ಭುವನೇಶ್ವರಿಯ ಮೆರವಣಿಗೆ ನಡೆಯಲಿದೆ. ಅಜ್ಜಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಬೇಬಿ ಕಲ್ತಡ್ಕ ಉದ್ಘಾಟಿಸಲಿದ್ದಾರೆ. ಧ್ವಜರೋಹಣವನ್ನು ಅಜ್ಜಾವರ ಗ್ರಾಮ ಪಂಚಾಯತ್ ಸದಸ್ಯೆ ಲೀಲಾ ಮನಮೋಹನ ನೆರವೇರಿಸಲಿದ್ದಾರೆ. ಶ್ರೀ ಮಹಿಷಮರ್ಧಿನಿ ದೇವಸ್ಥಾನ ಇದರ ಧರ್ಮದರ್ಶಿಗಳಾದ ಭಾಸ್ಕರ ರಾವ್ ಬಯಂಬು ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ದ. ರಾ. ಬೇಂದ್ರೆ ನೆನಪು ಹಾಗೂ ಗಾಯನ ಕಾರ್ಯಕ್ರಮವನ್ನು ಖ್ಯಾತ ಗಾಯಕ ಕೆ. ಆರ್. ಗೋಪಾಲಕೃಷ್ಣ ಇವರು ನಡೆಸಿಕೊಡಲಿದ್ದಾರೆ. ಜೊತೆಗೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ಅಜ್ಜಾವರ ಕ್ಲಸ್ಟರ್ ಮಟ್ಟದ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಡಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಗ್ರಾಪಂ ಸದಸ್ಯ ರಾಹುಲ್ ಅಡ್ಪಂಗಾಯ ಚಾಲನೆಯನ್ನು ನೀಡಲ್ಲಿದ್ದಾರೆ. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಪ್ರೌಢಶಾಲೆ ಅಜ್ಜಾವರ ಇದರ ಅಧ್ಯಕ್ಷ ಜಯರಾಮ ಬಿ. ಯಸ್ ಬಹುಮಾನ ವಿತರಿಸುವರು.
ನ.2 ರಂದು ನೆಹರೂ ಮೆಮೋರಿಯಲ್ ಕಾಲೇಜಿನ ಐಕ್ಯೂಎಸಿ ಕನ್ನಡ ವಿಭಾಗ, ಕನ್ನಡ ಸಂಘ ಸಹಯೋಗದೊಂದಿಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ.ಯು. ಆರ್. ಅನಂತಮೂರ್ತಿ ನೆನಪು ಕಾರ್ಯಕ್ರಮ ಹಾಗೂ ಗೀತ ಸಾಹಿತ್ಯ ವೈವಿಧ್ಯ ಕಾರ್ಯಕ್ರಮದ ಉದ್ಘಾಟನೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನ ಕಾರ್ಯದರ್ಶಿ ಕೆ. ವಿ. ಹೇಮನಾಥ ನಡೆಸಿಕೊಡಲಿದ್ದಾರೆ. ನೆಹರೂ ಮೆಮೋರಿಯಲ್ ಕಾಲೇಜಿನ ಉಪನ್ಯಾಸಕರಾದ ಡಾ. ಅನುರಾಧ ಕುರುಂಜಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ಯು. ಆರ್. ಅನಂತಮೂರ್ತಿ ಇವರ ನೆನಪು ಹಾಗೂ ಬೊಳಂತಿಮೊಗರಿನ ಖ್ಯಾತ ಕಲಾವಿದರಾದ ವಿಠಲ ನಾಯಕ್ ಇವರಿಂದ ಗೀತಾ ಸಾಹಿತ್ಯ ವೈವಿದ್ಯ ಕಾರ್ಯಕ್ರಮ ನಡೆಯಲಿದೆ. ಅ. 1.30ರಿಂದ ಸರಕಾರಿ ಪದವಿ ಪೂರ್ವ ವಿದ್ಯಾಲಯ, ಸುಳ್ಯ ಇವರ ಸಹಯೋಗದೊಂದಿಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಇವರ ನೆನಪು, ಗೀತ ಸಾಹಿತ್ಯ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ. ಅಧ್ಯಕ್ಷತೆಯನ್ನು ಶಾಲಾಭಿವೄದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ರಾಜೇಶ್ವರಿ ಕಾಡುತೋಟ ವಹಿಸಲ್ಲಿದ್ದು,ಉದ್ಘಾಟನೆಯನ್ನು ಚಂದ್ರಶೇಖರ ಪೇರಾಲು ನಡೆಸಿಕೊಡಲಿದ್ದಾರೆ. ಸ. ಪ. ಪೂ. ಕಾಲೇಜಿನ ಸಹಶಿಕ್ಷಕರಾದ ಮಮತಾ ಮೂಡಿತ್ತಾಯ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಇವರ ನೆನಪು ಹಾಗೂ ಬೊಳಂತಿಮೊಗರಿನ ಖ್ಯಾತ ಹಾಸ್ಯ ಕಲಾವಿದರಾದ ವಿಠಲ ನಾಯಕ್ ಇವರಿಂದ ಗೀತಾ ಸಾಹಿತ್ಯ ವೈವಿಧ್ಯ ಕಾರ್ಯಕ್ರಮವಹಿಸಲಿದ್ದಾರೆ.
ನ.3 ರಂದು ರೋಟರಿ ಪ್ರೌಢಶಾಲೆ ಮಿತ್ತಡ್ಕ ಹಾಗೂ ರೋಟರಿ ಕ್ಲಬ್ ಸುಳ್ಯ ಇವರ ಸಹಯೋಗದೊಂದಿಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ಕೆ ಶಿವರಾಮ ಕಾರಂತರ ನೆನಪು ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಕ. ಸಾ. ಪ ಅಧ್ಯಕ್ಷ ಚಂದ್ರಶೇಖರ ಪೇರಾಲು ವಹಿಸಲಿದ್ದು ಉದ್ಘಾಟನೆಯನ್ನು ರೋಟರಿ ಕ್ಲಬ್ ಸುಳ್ಯ ಇದರ ಅಧ್ಯಕ್ಷರಾದ ಆನಂದ ಖಂಡಿಗ ನಡೆಸಿಕೊಡಲಿದ್ದಾರೆ. ಸಾಹಿತಿಗಳು ಹಾಗೂ ಜನಪದ ಸಂಶೋಧಕರಾದ ಡಾ. ಪೂವಪ್ಪ ಕಣಿಯೂರು ಇವರಿಂದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಶಿವರಾಮ ಕಾರಂತ ನೆನಪು ಕಾರ್ಯಕ್ರಮ ನಡೆಯಲಿದೆ.
ನ.4ರಂದು ಅಪರಾಹ್ನ ೨ ಘಂಟೆಗೆ ಐವರ್ನಾಡು ಸರಕಾರಿ ಪದವಿ ಪೂರ್ವ (ಪ್ರೌಡಶಾಲಾ ವಿಭಾಗ) ಇಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಗಿರೀಶ್ ಕಾರ್ನಾಡು ನೆನಪು ಹಾಗೂ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಭಾವಗಾನ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಕ. ಸಾ. ಪ ಅಧ್ಯಕ್ಷ ಚಂದ್ರಶೇಖರ ಪೇರಾಲು ವಹಿಸಲಿದ್ದಾರೆ.ಉದ್ಘಾಟನೆಯನ್ನು ಐವರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಲೀಲಾವತಿ ಕುತ್ಯಾಡಿ ನಡೆಸಿಕೊಡಲಿದ್ದಾರೆ. ಸಂಧ್ಯಾರಶ್ಮಿ ಸಾಹಿತ್ಯ ಸಂಘ ಸುಳ್ಯ ಇದರ ಅಧ್ಯಕ್ಷರಾದ ಲೀಲಾ ದಾಮೋಧರ ಇವರಿಂದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಗಿರೀಶ್ ಕಾರ್ನಾಡ್ ನೆನಪು ಕಾರ್ಯಕ್ರಮ ಹಾಗೂ ಭಾವ – ಗಾನ ಕಾರ್ಯಕ್ರಮವನ್ನು ಖ್ಯಾತ ಸುಗಮ ಸಂಗೀತ ಕಲಾವಿದರಾದ ಕೆ. ಆರ್. ಗೋಪಾಲಕೃಷ್ಣ ಇವರು ನಡೆಸಿಕೊಡಲಿದ್ದಾರೆ
ನ.5ರಂದು ಪೂ. ೯.೩೦ಕ್ಕೆ ಸುವಿಚಾರ ಸಾಹಿತ್ಯ ವೇದಿಕೆ ಸುಳ್ಯ ಇದರ ಸಹಕಾರದೊಂದಿಗೆ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಇದರ ಸವಿನೆನಪಿಗಾಗಿ ತಾಲೂಕು ಮಟ್ಟದ ಕವಿಗೋಷ್ಠಿ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ವಿ.ಕೃ ಗೋಕಾಕ್ ನೆನಪು ಕಾರ್ಯಕ್ರಮ ಸುಳ್ಯದ ಅಂಬೆಟಡ್ಕದಲ್ಲಿರುವ ಕನ್ನಡ ಭವನದಲ್ಲಿ ನಡೆಯಲಿದೆ. ಕವಿಗೋಷ್ಠಿಯಲ್ಲಿ ತಾಲೂಕಿನ ಸುಮಾರು ೨೦ ಕವಿಗಳು ಭಾಗವಹಿಸಲಿದ್ದಾರೆ. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಸಂಗೀತಾ ರವಿರಾಜ್ ಚೆಂಬು ವಹಿಸಲಿದ್ದಾರೆ. ಕಾರ್ಯಕ್ರಮವನ್ನು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವಾಧ್ಯಕ್ಷರಾದ ಮೀನಾಕ್ಷಿ ಗೌಡ ಉದ್ಘಾಟಿಸಲಿದ್ದಾರೆ. ಕ. ಸಾ. ಪ. ದ ಗೌರವ ಕಾರ್ಯದರ್ಶಿ ಚಂದ್ರಮತಿ ಕೆ., ಇವರಿಂದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ವಿ. ಕೃ. ಗೋಕಾಕ್ ನೆನಪು ಕಾರ್ಯಕ್ರಮ ನಡೆಯಲಿದೆ.
ನ.6ರಂದು ಪೂರ್ವಾಹ್ನ ೧೦ಕ್ಕೆ ಸಂಧ್ಯಾರಶ್ಮಿ ಸಾಹಿತ್ಯ ಸಂಘ ಸುಳ್ಯ ಇದರ ಸಹಯೋಗದೊಂದಿಗೆ ಕನ್ನಡದ ಕಿರಣ – ಕುತ್ಯಾಳ ಕಾರ್ಯಕ್ರಮ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕುವೆಂಪು ನೆನಪು ಮತ್ತು ಗಾಯನ ಕಾರ್ಯಕ್ರಮ ಸಂಧ್ಯಾ ರಶ್ಮಿ ಸಭಾಭವನ ಸುಳ್ಯ ಇಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಕ. ಸಾ. ಪ ಅಧ್ಯಕ್ಷ ಚಂದ್ರಶೇಖರ ಪೇರಾಲು ವಹಿಸಲಿದ್ದಾರೆ. ಉದ್ಘಾಟನೆಯನ್ನು ಖ್ಯಾತ ಕವಿಗಳಾದ ಜಿ.ಎಸ್.ಉಬರಡ್ಕ ನಡೆಸಿಕೊಡಲಿದ್ದಾರೆ. ಕುತ್ಯಾಳ ನಾಗಪ್ಪ ಗೌಡ (ಕಿರಣ) ಇವರಿಗೆ ಗೌರವಾರ್ಪಣೆ ನಡೆಯಲಿದೆ. ಕಿರಣರ ಕೃತಿ ಪರಿಚಯವನ್ನು ಲೇಖಕಿ ಚಂದ್ರಾವತಿ ಬಡ್ಡಡ್ಕ ನೆರವೇರಿಸಲಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕುವೆಂಪು ನೆನಪು ಹಾಗೂ ಗಾಯನ ಕಾರ್ಯಕ್ರಮವನ್ನು ಖ್ಯಾತ ಸುಗಮ ಸಂಗೀತ ಕಲಾವಿದರಾದ ಕೆ. ಆರ್. ಗೋಪಾಲಕೃಷ್ಣ ಇವರು ನಡೆಸಿಕೊಡಲಿದ್ದಾರೆ.
ನ.7ರಂದು ಸಾಹಿತ್ಯ ಸಂಭ್ರಮ ಸಮಾರೋಪ ಕಾರ್ಯಕ್ರಮ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರರ ಬದುಕು -ಬರಹ ಅವಲೋಕನ ಕಾರ್ಯಕ್ರಮ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜಟ್ಟಿಪಳ್ಳದ ದಯಾನಂದ ಆಳ್ವ ಇವರ ಮನೆ “ಪದ್ಮಶ್ರೀ”ಯಲ್ಲಿ ಸಂಜೆ 6 ಗಂಟೆಗೆ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಕ. ಸಾ. ಪ ಅಧ್ಯಕ್ಷರಾದ ಚಂದ್ರಶೇಖರ ಪೇರಾಲು ವಹಿಸಲಿದ್ದಾರೆ. ಸಮಾರೋಪ ಭಾಷಣವನ್ನು ಖ್ಯಾತ ಬರಹಗಾರರು, ಸಾಹಿತಿಗಳು ಆದ ಡಾ. ನರೇಂದ್ರ ರೈ ದೇರ್ಲ ನಡೆಸಿಕೊಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಗೂನಡ್ಕ ಇದರ ಅಧ್ಯಕ್ಷ ಡಾ. ಉಮ್ಮರ್ ಬೀಜದಕಟ್ಟೆ ಭಾಗವಹಿಸಲಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪುರಸ್ಜೃತ ಡಾ. ಚಂದ್ರಶೇಖರ ಕಂಬಾರ ಬದುಕು – ಬರಹ ಅವಲೋಕನ ಕಾರ್ಯಕ್ರಮವನ್ನು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಉಪನ್ಯಾಸಕರಾದ ಪ್ರೊ. ಸಂಜೀವ ಕುದ್ಪಾಜೆಯವರು ನಡೆಸಿಕೊಡಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರಿತಿಸಿ ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆಮವವೈಧ್ಯಕೀಯ ಕ್ಷೇತ್ರದ ಸಾಧನೆಗಾಗಿ ಡಾ. ನಿತಿನ್ ಪ್ರಭು ಕೆ., ರಕ್ತದಾನ ಕ್ಷೇತ್ರದ ಸಾಧನೆಗಾಗಿ ಸುಧಾಕರ ರೈ, ಯಕ್ಷಗಾನ ಕ್ಷೇತ್ರದ ಸಾಧನೆಗಾಗಿ ಕೋಡ್ಲ ಗಣಪತಿ ಭಟ್ ಹಾಗೂ ಜನಪದ ಕ್ಷೇತ್ರದ ಸಾಧನೆಗಾಗಿ ಜಯರಾಮ ಬೊಳಿಯಮಜಲು ಇವರುಗಳನ್ನು ಸನ್ಮಾನಿಸಲಾಗುವುದು. ಕೆ. ಆರ್. ಗೋಪಾಲಕೃಷ್ಣ ಇವರಿಂದ ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಭಾವಗಾನ ಕಾರ್ಯಕ್ರಮ ನಡೆಯಲಿದೆ ಎಂದು ಚಂದ್ರಶೇಖರ ಪೇರಾಲು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕಸಾಪ ಗೌರವ ಕಾರ್ಯದರ್ಶಿ ಚಂದ್ರಮತಿ ಕೆ, ಕಾರ್ಯಕಾರಿ ಸಮಿತಿ ಸದಸ್ಯರಾದ ಕೇಶವ ಸಿ.ಎ, ರಮೇಶ್ ನೀರಬಿದಿರೆ, ಶರೀಫ್ ಜಟ್ಟಿಪಳ್ಳ, ಲತಾಶ್ರೀ ಸುಪ್ರೀತ್ ಮೋಂಟಡ್ಕ ಉಪಸ್ಥಿತರಿದ್ದರು.