ಸುಳ್ಯ:ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಶಿಕ್ಷಣ, ಕಲೆ, ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡು ನಿವೃತ್ತರಾದ ಹಿರಿಯ ಶಿಕ್ಷಕರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ನಿವೃತ್ತ ಶಿಕ್ಷಕರಾದ ಆರ್.ಕೆ ಭಾಸ್ಕರ ಬಾಳಿಲ ಹಾಗೂ ಕಲಾವತಿ ಅಟ್ಲೂರು ಅವರನ್ನು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತ್ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ
ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ್ ಪೇರಾಲ್, ಸುಳ್ಯ ಹೋಬಳಿ ಘಟಕದ ಅಧ್ಯಕ್ಷೆ ಚಂದ್ರಾವತಿ ಬಡ್ಡಡ್ಕ, ಪಂಜ ಹೋಬಳಿ ಘಟಕದ ಅಧ್ಯಕ್ಷ ಬಾಬು ಗೌಡ ಅಚ್ರಪ್ಪಾಡಿ, ಜಿಲ್ಲಾ ಪ್ರತಿನಿಧಿ ರಾಮಚಂದ್ರ ಪಲ್ಲತ್ತಡ್ಕ, ಕಸಾಪ ಕಾರ್ಯದರ್ಶಿಗಳಾದ ಚಂದ್ರಮತಿ ಕೆ, ತೇಜಸ್ವಿ ಕಡಪಳ, ಕಾರ್ಯಕಾರಿ ಸಮಿತಿ ಸದಸ್ಯರಾದ ಕೇಶವ ಸಿ.ಎ., ಲತಾಶ್ರೀ ಸುಪ್ರೀತ್ ಮೋಂಟಡ್ಕ, ಪ್ರಮುಖರಾದ ಸಿ. ಎ. ಗಣೇಶ್ ಭಟ್, ಸುಹಾಸ್, ಕೆ.ವಿ. ಶರ್ಮ ದಂಪತಿಗಳು ಬಾಳಿಲ, ಕರುಣಾಕರ ಶೆಟ್ಟಿ ನಾಲ್ಗುತ್ತು, ರವೀಂದ್ರ ರೈ ಟಪ್ಪಾಲುಕಟ್ಟೆ, ರಮೇಶ್ ರೈ ಅಗಲ್ಪಾಡಿ, ಗೌತಮ್ ಕಾಂಚೋಡು, ರಾಜೀವಿ, ಜಯರಾಮ್ ರೈ, ಹರೀಶ್ ರೈ,. ಶಶಿಕಲಾ ಭಾಸ್ಕರ, ದೇವಿಪ್ರಸಾದ್ ಅತ್ಯಾಡಿ, ರವಿಪ್ರಕಾಶ್ ಅಟ್ಲೂರು ಮತ್ತಿತರರು
ಉಪಸ್ಥಿತರಿದ್ದರು.












