ಅಜ್ಜಾವರ: ಅಜ್ಜಾವರ ಗ್ರಾಮದ ಕರ್ಲಪ್ಪಾಡಿ ಶ್ರೀ ಶಾಸ್ತಾವೇಶ್ವರ ದೇವಸ್ಥಾನದ ಜಾತ್ರೋತ್ಸವದ ಸಿದ್ಧತೆಯ ಹಿನ್ನಲೆಯಲ್ಲಿ ಮೇನಾಲ ಶ್ರೀ ವಿಷ್ಣು ಯುವಕ ಮಂಡಲ ವತಿಯಿಂದ ಶ್ರಮದಾನ ಸೇವೆ ನಡೆಯಿತು.
ಶ್ರೀ ಶಾಸ್ತಾವೇಶ್ವರ ದೇವಸ್ಥಾನದ ಕಾಲಾವದಿ ಉತ್ಸವ ದಿನಾಂಕ ಡಿ.15ರಿಂದ 19ರ ತನಕ ನಡೆಯಲಿದೆ. ಇದರ ಪೂರ್ವ ತಯಾರಿಯಾಗಿ

ವಿಷ್ಣು ಯುವಕ ಮಂಡಲದ ಸದಸ್ಯರು ಶ್ರಮದಾನ ನಡೆಸಿದರು. ಈ ಸಂದರ್ಭದಲ್ಲಿ ವಿಷ್ಣು ಯುವಕ ಮಂಡಲದ ಅಧ್ಯಕ್ಷ ರಂಜಿತ್ ರೈ ಮೇನಾಲ,ಗೌರವಾಧ್ಯಕ್ಷ ಶ್ರೀಧರ ಮಣಿಯಾಣಿ ಮೇನಾಲ
ಯುವಕ ಮಂಡಲದ ಪದಾಧಿಕಾರಿಗಳಾದ ಶರಣ್ಯ ರಾವ್ ತುದಿಯಡ್ಕ.
ಉಮೇಶ್ ಇರಂತಮಜಲು,ಹರ್ಷಿತ್ ರೈ ಬೇಲ್ಯ, ಯತೀಶ್ ಗೌಡ, ಮೋಹನ್ ಬೇಲ್ಯ, ಸಂದೇಶ್ ಇರಂತಮಜಲು,ರಾಮ ಬಾಡೇಲು, ಅನಿಲ್,
ಹರೀಶ್ ಇರಂತಮಜಲು,ಪ್ರಕಾಶ್ ಕಲ್ಲುಗುಡ್ಡೆ ಪ್ರವೀಣ್ ಇರಂತಮಜಲು, ಹರೀಶ್ ,ಸಿಂಚನ್ ರೈ, ಪ್ರಥಮ್ ರಾವ್ ,ಪ್ರಶಾಂತ್ , ಪದ್ಮನಾಭ ಮತ್ತಿತರರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪ್ರಧಾನ ಅರ್ಚಕರಾದ ಈಶ್ವರ ಭಟ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜೇಶ್ ಶೆಟ್ಟಿ ಮೇನಾಲ, ಅನಿಲ್ ಪಡ್ಡಂಬೈಲ್ ಉಪಸ್ಥಿತರಿದ್ದರು.









