ಕರಿಕೆ:ಕರಿಕೆ ಗ್ರಾಮ ಪಂಚಾಯತಿ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮೀತಿ ವತಿಯಿಂದ 68ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಪ್ರೌಢ ಶಾಲೆಯಿಂದ ಎಳ್ಳುಕೊಚ್ಚಿ ಪೇಟೆ ವರೆಗೆ ಮೆರವಣಿಗೆ ನಡೆಯಿತು. ಬಳಿಕ ಎಳ್ಳುಕೊಚ್ಚಿಯಲ್ಲಿ ನಡೆದ ಸಮಾರಂಭದಲ್ಲಿ
ಗ್ರಾಮ ಪಂಚಾಯತಿ ಅಧ್ಯಕ್ಷರಾದ ಬಾಲಚಂದ್ರನ್ ನಾಯರ್ ಎನ್ ಧ್ವಜಾರೋಹಣ ನೆರವೇರಿಸಿದರು. ನಂತರ ಸಿಹಿ ವಿತರಿಸಲಾಯಿತು. ಪಂಚಾಯತಿ ಉಪಾಧ್ಯಕ್ಷೆ ಕಲ್ಪನಾ ಜಗದೀಶ್, ಪಂಚಾಯತಿ ಸದಸ್ಯರಾದ ಕಟ್ಟ ಕೋಡಿ ದೇವದತ್ತ, ಆಯಿಷಾ, ಜಯಶ್ರೀ ಜನಾರ್ಧನ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮೀತಿಯ ಪದಾಧಿಕಾರಿಗಳು, ಸದಸ್ಯರುಗಳು, ಕರಿಕೆ ಪ್ರೌಢ ಶಾಲೆಯ ಶಿಕ್ಷಕರು , ಪ್ರೌಢ ಶಾಲೆ ಯ ವಿದ್ಯಾಥಿ೯ಗಳು , ಎಸ್ಡಿಎಂಸಿ ಸದಸ್ಯರು, ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು, ವಿದ್ಯಾಥಿ೯ಗಳು, ಎಸ್ಡಿಎಂಸಿ ಪದಾಧಿಕಾರಿಗಳು, ಸಹಕಾರ ಸಂಘದ ಉಪಾಧ್ಯಕ್ಷರಾದ ಎಂ ಎಂ ರೆಲ್ಸನ್, ನಿದೇ೯ಶಕರು, ಅಂಗನವಾಡಿ ಕಾಯ೯ಕರ್ತರು, ಪಂಚಾಯತಿ ಸಿಬ್ಬಂದಿ ವಗ೯, ಸಾವ೯ಜನಿಕರು ಭಾಗವಹಿಸಿದರು… ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪಿ.ಪಿ.ಗಣಪತಿ ಸ್ವಾಗತಿಸಿದರು.