ಬೆಂಗಳೂರು: ‘ಕಾಂತಾರ’ ಚಿತ್ರದ ಪ್ರಿಕ್ವೆಲ್ ಆಗಿ ‘ಕಾಂತಾರ ಚಾಪ್ಟರ್ 1’ ಸಿನಿಮಾದ ಫಸ್ಟ್ ಲುಕ್ ಟೀಸರ್ ನವೆಂಬರ್ 27ರಂದು ರಿಲೀಸ್ ಆಗಿದೆ. 24 ಗಂಟೆಯಲ್ಲಿ ಈ ಟೀಸರ್ 12 ಮಿಲಿಯನ್ ವೀಕ್ಷಣೆ ಕಂಡಿದೆ. ಅಂದರೆ, 1.2 ಕೋಟಿ ವೀವ್ಸ್ ಆಗಿದೆ. ಕಳೆದ ವರ್ಷ ‘ಕಾಂತಾರ’ ಸಿನಿಮಾ ರಿಲೀಸ್
ಆಗಿ ಭಾರೀ ಹಿಟ್ ಆಗಿತ್ತು. ಇದೀಗ ಎರಡನೇ ಭಾಗ ಕಾಂತಾರ ಚಾಪ್ಟರ್ 1 ಗೆ ನವೆಂಬರ್ 27ರಂದು ಕುಂದಾಪುರ ಆನೆಗುಡ್ಡೆ ದೇವಾಲಯದಲ್ಲಿ ಚಿತ್ರತಂಡ ಪೂಜೆ ಮಾಡಿದೆ. ಜೊತೆಗೆ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ.
ರಿಷಬ್ ಶೆಟ್ಟಿ ಅವರು ಒಂದು ಕೈಯಲ್ಲಿ ತ್ರಿಶೂಲ, ಮತ್ತೊಂದು ಕೈಯಲ್ಲಿ ಖಡ್ಗ ಹಿಡಿದಿದ್ದಾರೆ. ಈ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಟೀಸರ್ ಟ್ರೆಂಡಿಂಗ್ ಆಗಿದೆ.





