ಸುಳ್ಯ:ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ಕಂದ್ರಪ್ಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭ ಫೆ.8ರಂದು ನಡೆಯಲಿದೆ. 8ರಂದು ಪೂರ್ವಾಹ್ನ ಗಂಟೆ 9ಕ್ಕೆ ನಿವೃತ್ತ ಮುಖ್ಯಗುರು ಬಾಲಕೃಷ್ಣ ಮಾಸ್ತರ್ ಹಿರಿಯಡ್ಕ ಧ್ವಜಾರೋಹಣ ನೆರವೇರಿಸುವರು. ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಚಂದ್ರಶೇಖರ ಕಂದ್ರಪ್ಪಾಡಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಪೂರ್ವಾಹ್ನ ಗಂಟೆ 10.30ರಿಂದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಪ್ರಾಥಮಿಕ ಮತ್ತು
ಪ್ರೌಢಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ನವೀಕೃತ ಕೊಠಡಿ ಉದ್ಘಾಟಿಸುವರು. ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸುವರು. ಸಂಸದ ನಳಿನ್ ಕುಮಾರ್ ಕಟೀಲ್ ನೂತನ ರಂಗಮಂದಿರ ಉದ್ಘಾಟಿಸುವರು. ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್ ಕ್ರೀಡಾಂಗಣ ಉದ್ಘಾಟಿಸುವರು. ವಿಧಾನ ಪರಿಷತ್ ಶಾಸಕ ಎಸ್.ಎಲ್.ಭೋಜೇಗೌಡ ಶಿಕ್ಷಕರ ವಸತಿಗೃಹ ಉದ್ಘಾಟಿಸುವರು. ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ ಇಂಟಾರ್ ಲಾಕ್ ಅಳವಡಿಕೆ ಉದ್ಘಾಟಿಸುವರು. ದೇವಚಳ್ಳ ಗ್ರಾ.ಪಂ. ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ಆವರಣ ಗೋಡೆ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಬಿ.ಈ. ಜಿ.ಪಂ. ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಜಿ.ಪಂ.ಮಾಜಿ ಸದಸ್ಯ ಭರತ್ ಮುಂಡೋಡಿ, ನಿವೃತ್ತ ಬಿಡಿಒ ಮೀನಾಕ್ಷಿ ಗೌಡ ಎಂ., ಗ್ರಾ.ಪಂ.ಸದಸ್ಯರಾದ ಸುಲೋಚನಾ ದೇವ, ಸೀತಮ್ಮ ಕರಂಗಲ್ಲು ಭಾಗವಹಿಸುವರು.

ಮಧ್ಯಾಹ್ನದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಸಂಜೆ ಗಂಟೆ 5ರಿಂದ ಸಮಾರೋಪ ಸಮಾರಂಭ ನಡೆಯಲಿದೆ. ಶತಮಾನೋತ್ಸವ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಅಧ್ಯಕ್ಷತೆ ವಹಿಸುವರು. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಕೋಟ ಶ್ರೀನಿವಾಸ ಪೂಜಾರಿ ಶಾಲೆಯಲ್ಲಿ ಸೇವೆಗೈದ ಶಿಕ್ಷಕರನ್ನು ಗೌರವಿಸುವರು. ಮಾಜಿ ಸಚಿವ ರಮಾನಾಥ ರೈ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಹಾವೇರಿ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿ ಡಾ.ಕೆ.ಚಿನ್ನಪ್ಲ ಗೌಡ ದಿಕ್ಸೂಚಿ ಭಾಷಣ ಮಾಡುವರು. ಮುಖ್ಯ ಅತಿಥಿಗಳಾಗಿ

ಮಾಜಿ ಸಚಿವ ಎಸ್.ಅಂಗಾರ, ಪ್ರಮುಖರಾದ ಆನಂದ ಸುವರ್ಣ, ಮೋಹನ್ ರಾಂ ಸುಳ್ಳಿ, ಉಮೇಶ್ ಮುಂಡೋಡಿ, ರಮೇಶ್ ಪಡ್ಪು, ಭವಾನಿಶಂಕರ ಮುಂಡೋಡಿ, ಕಾಳಿಕಾಪ್ರಸಾದ್ ಮುಂಡೋಡಿ ಭಾಗವಹಿಸುವರು. ಮಧ್ಯಾಹ್ನದ ಬಳಿ ವಿವಿಧ ವಿನೋದಾವಳಿಗಳು, ರಾತ್ರಿ 8ರಿಂದ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಗಂಟೆ 10ರಿಂದ ಡಾ.ದೇವದಾಸ್ ಕಾಪಿಕಾಡ್ ಅವರ ಚಾ ಪರ್ಕ ಕಲಾವಿದರು ಅಭಿನಯಿಸುವ ತುಳು ಹಾಸ್ಯಮಯ ನಾಟಕ ಪುದರ್ ದೀದಾಂಡ್ ಪ್ರದರ್ಶನಗೊಳ್ಳಲಿದೆ ಎಂದು ಎಂದು ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ.







