ಕನಕಮಜಲು: ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಸುಧಾಕರ ಕಾಮತ್ ಹಾಗೂ ಉಪಾಧ್ಯಕ್ಷರಾಗಿ ವೆಂಕಪ್ಪ ನಾಯ್ಕ ದೇರ್ಕಜೆ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜ.4ರಂದು ನಡೆದ ಅಧ್ಯಕ್ಷ – ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸುಧಾಕರ ಕಾಮತ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ವೆಂಕಪ್ಪ ನಾಯ್ಕ ದೇರ್ಕಜೆ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದ ಕಾರಣ
ಅವಿರೋಧ ಆಯ್ಕೆ ನಡೆಯಿತು.ಅಧ್ಯಕ್ಷತೆಗೆ ಕಾಮತ್ ಅವರ ಹೆಸರನ್ನು ನಿರ್ದೇಶಕ ಸುನಿಲ್ ಅಕ್ಕಿಮಲೆ ಸೂಚಿಸಿದ್ದರು.ಸಂಘದ ನಿರ್ದೇಶಕ ನಿರಂಜನ್ ಬೊಳುಬೈಲ್ ಅನುಮೋದಿಸಿದರು.ಉಪಾಧ್ಯಕ್ಷತೆಗೆ ವೆಂಕಪ್ಪ ನಾಯ್ಕರ ಹೆಸರನ್ನು ನಿರ್ದೆಶಕಿ ದಮಯಂತಿ ಸೂಚಿಸಿ, ನಿರ್ದೇಶಕಿ ವಿನುತಾ ಸಾರಕೂಟೇಲು ಅನುಮೋದಿಸಿದರು.
ಸಹಕಾರ ಇಲಾಖೆಯ ಅಧಿಕಾರಿ ಶಿವಲಿಂಗಯ್ಯ ಚುನಾವಣಾಧಿಕಾರಿಯಾಗಿದ್ದರು. ಸಹಕಾರಿ ಸಂಘದ ನಿರ್ದೇಶಕರುಗಳು, ಡಿಸಿಸಿ ಬ್ಯಾಂಕ್ ಪ್ರತಿನಿಧಿ ಮೇಲ್ವಿಚಾರಕ ರಥನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಹಿತ್, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಹಾಗೂ ಮುಖಂಡರು ಉಪಸ್ಥಿತರಿದ್ದರು. ಇತ್ತೀಚೆಗೆ ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ 12 ರಲ್ಲಿ 11 ಸ್ಥಾನ ಪಡೆದು ಅಧಿಕಾರ ಗಳಿಸಿತ್ತು.