ಜಾಲ್ಸೂರು:ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಡಿ.22ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಬಹುಮತ ಪಡೆದಿದೆ. ಇಂದು ನಡೆದ ಚುನಾವಣೆಯಲ್ಲಿ 12 ಸ್ಥಾನಗಳ ಪೈಕಿ 11 ಸ್ಥಾನಗಳಲ್ಲಿ ಸಹಕಾರ ಭಾರತಿ ಭರ್ಜರಿ ಗೆಲುವು ಸಾಧಿಸಿದೆ. ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ 11 ಮಂದಿ ಅಭ್ಯರ್ಥಿಗಳು ಹಾಗೂ
ಒಬ್ಬರು ಸ್ವತಂತ್ರ ಸ್ಪರ್ಧೆ ಮಾಡಿದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಸಾಲಗಾರರಲ್ಲದ ಕ್ಷೇತ್ರದಿಂದ ಕೆ.ಸುಧಾಕರ ಕಾಮತ್ ಜಯಗಳಿಸಿದ್ದಾರೆ.
ಸಾಲಗಾರ ಕ್ಷೇತ್ರ (ಸಾಮಾನ್ಯ)ದಿಂದ ಡಾ.ಗೋಪಾಲಕೃಷ್ಣ ಭಟ್ ಕಾಟೂರು,ತಿಲೋತ್ತಮ ಕೊಲ್ಲಂತಡ್ಕ, ಕುಸುಮಾಧರ ಅರ್ಭಡ್ಕ, ಸುನಿಲ್ ಅಕ್ಕಿಮಲೆ, ಗೆಲುವು ಸಾಧಿಸಿದರೆ.
ಸ್ವತಂತ್ರರಾಗಿ ಸ್ಪರ್ಧಿಸಿದ್ದ ಗಂಗಾಧರ ಕಾಳಮನೆ ಗೆಲುವು ಸಾಧಿಸಿದ್ದಾರೆ.
ಹಿಂದುಳಿದ ವರ್ಗ ಪ್ರವರ್ಗ “ಎ” ಸಾಲಗಾರ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಗಂಗಾಧರ ರೈ ಸೋಣಂಗೇರಿ,
ಸಾಲಗಾರ ಕ್ಷೇತ್ರ ಹಿಂದುಳಿದ ವರ್ಗ ಪ್ರವರ್ಗ “ಬಿ” ಮೀಸಲು ಸ್ಥಾನದಿಂದ ಬಿಜೆಪಿಯ ಸಂದೀಪ್ ಕದಿಕಡ್ಕ,
ಸಾಲಗಾರ ಕ್ಷೇತ್ರ ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ ವೆಂಕಪ್ಪ ನಾಯ್ಕ ದೇರ್ಕಜೆ,
ಸಾಲಗಾರ ಕ್ಷೇತ್ರ- ಮಹಿಳಾ ಮೀಸಲು ಸ್ಥಾನದಿಂದ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ವಿನುತಾ ಸಾರಕೂಟೇಲು, ದಮಯಂತಿ ಜಯ ಗಳಿಸಿದರು.ಸಾಲಗಾರ ಕ್ಷೇತ್ರ ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಬಿಜೆಪಿ ಬೆಂಬಪಿತ ನಿರಂಜನ ಬೊಳುಬೈಲು ಆಯ್ಕೆಯಾದರು.
12 ಸ್ಥಾನಗಳಿಗೆ
ಒಟ್ಟು 29 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದರು.