ಸುಳ್ಯ: ಮಂಡ್ಯ,ಮೈಸೂರು ಭಾಗಗಳಲ್ಲಿ ಖ್ಯಾತಿ ಹೊಂದಿರುವ ನೃತ್ಯ, ಸಂಗೀತ ಕಲಾ ಅಕಾಡೆಮಿ ಗುರುದೇವ ಲಲಿತ ಕಲಾ ಅಕಾಡೆಮಿಯ ವತಿಯಿಂದ ನೃತ್ಯ ವಿದ್ಯಾರ್ಥಿಗಳಿಗೆ ವಸತಿ ಶಿಬಿರ ಹಾಗು ಕಾರ್ಯಾಗಾರ ಕನಕಮಜಲಿನ ಕನಕಕಲಾ ಗ್ರಾಮದಲ್ಲಿ ಏಪ್ರಿಲ್ 13ರಿಂದ 16ರ ತನಕ
ನಡೆಯಲಿದೆ. ಪ್ರಕೃತಿಯ ಮಧ್ಯೆಯ ಕನಕಕಲಾ ಗ್ರಾಮದಲ್ಲಿ ಭರತನಾಟ್ಯ ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಯಾಗಾರ ನಡೆಯಲಿದೆ. ಜೊತೆಗೆ ಶಿಬಿರದಲ್ಲಿ ಯೋಗ, ಭಜನೆ ತರಬೇತಿ, ಪ್ರಾಕೃತಿಕ ವಿಹಾರ, ಫಿಲಂ ಶೋ ಸೇರಿ ವಿವಿಧ ಚಟುವಟಿಕೆಗಳು ನಡೆಯಲಿದೆ.ಆಸಕ್ತರು ಅಕಾಡೆಮಿಯ ಕಲಾ ನಿರ್ದೇಶಕರಾದ ಚೇತನಾ ರಾಧಾಕೃಷ್ಣ ಅವರನ್ನು ಸಂಪರ್ಕಿಸಬಹುದು ದೂ:9535590287 ಎಂದು ಗುರುದೇವ ಲಲಿತ ಕಲಾ ಅಕಾಡೆಮಿಯ ಪ್ರಕಟಣೆ ತಿಳಿಸಿದೆ.