ಸುಳ್ಯ: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸುಳ್ಯ ವಿಧಾನಸಭಾ ಕ್ಷೇತ್ರ ಅಭ್ಯರ್ಥಿ ಸುಂದರ ಮೇರ ಅವರು ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.
ಬೆಳಗ್ಗೆ ಅಂಕತಡ್ಕ ಸ್ವಾಮಿ ಕೊರಗಜ್ಜ ದೈವಸ್ಥಾನ ಭೇಟಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಬೆಳ್ಳಾರೆ ಭಾಗದಲ್ಲಿ
ಚುನಾವಣಾ ಪ್ರಚಾರ ಕೈಗೊಂಡ ಅವರು ಪ್ರಮುಖರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಮನೆ ಮನೆ ಪ್ರಚಾರ ಕೈಗೊಂಡರು ಈ ಸಂದರ್ಭದಲ್ಲಿ ಪ್ರಮುಖರಾರ ಅಶೋಕ್ ಕೊಂಚಾಡಿ , ವಸಂತ್ , ಅಭಿಷೇಕ್ ಸುಳ್ಯ, ಸುಂದರ್ ನಿಡ್ಪೊಳ್ಳಿ, ರಾಮ್ ದಾಸ್ ಮೊದಲಾದವರು ಉಪಸ್ಥಿತರಿದ್ದರು.