ಕಲ್ಲುಗುಂಡಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನಾಚರಣೆಯ ಪ್ರಯುಕ್ತ ಸಂಪಾಜೆ ವಲಯ ಕಾಂಗ್ರೆಸ್ ವತಿಯಿಂದ ಗಾಂಧಿ ಜಯಂತಿಯನ್ನು ಆಚರಿಸಲಾಯಿತು. ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಬಳಿಕ ಕಾಂಗ್ರೆಸ್ ನಾಯಕರು ಕಲ್ಲುಗುಂಡಿ ಪೇಟೆಯಲ್ಲಿ
ಗಾಂಧಿ ನಡಿಗೆಯ ಮೂಲಕ ಹೆಜ್ಜೆ ಹಾಕಿದರು. ಕೂಲಿಶೆಡ್ಡ್ ನಲ್ಲಿ ನಡೆದ ಗಾಂಧಿ ನಡಿಗೆಯ ಸಮಾರೋಪದಲ್ಲಿ ಕರ್ನಾಟಕ ಸರ್ಕಾರದ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ರಾಜ್ಯ ಸದಸ್ಯ ಕೆ.ಪಿ.ಜಾನಿ ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಕುಂಞಿ ಗೂನಡ್ಕ, ಸಂಪಾಜೆ ವಲಯ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಎ.ಕೆ.ಇಬ್ರಾಹಿಂ, ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಲಿಸ್ಸಿ ಮೊನಾಲಿಸಾ, ಮಾಜಿ ಸದಸ್ಯರಾದ ಎ.ಕೆ.ಹನೀಫ್, ಬೆಂಜಮೀನ್ ಡಿ’ಸೋಜ, ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯೆ ಬಿ.ಎಸ್.ಕಾಂತಿ, ಪ್ರಮುಖರಾದ ಪಿ.ಎ.ಉಮ್ಮರ್ ಗೂನಡ್ಕ, ತಾಜ್ ಮಹಮ್ಮದ್ ಸಂಪಾಜೆ, ಎಚ್.ಎ.ಹಮೀದ್ ಸಂಪಾಜೆ, ವಸಂತ ಗೌಡ ಪೆಲ್ತಡ್ಕ, ನಾಗಮುತ್ತು, ಸೆಬಾಸ್ಟಿಯನ್, ಶಮೀರ್ ತಾಜ್ ಸಂಪಾಜೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕೆ.ಪಿ.ಸಿ.ಸಿ.ವಕ್ತಾರರಾದ ಶೌವಾದ್ ಗೂನಡ್ಕ ಸ್ವಾಗತಿಸಿ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ಜ್ಞಾನಶೀಲನ್ ರಾಜು ನೆಲ್ಲಿಕುಮೇರಿ ವಂದಿಸಿದರು.