ಸುಳ್ಯ: ಸುಳ್ಯ ಗಾಂಧಿನಗರ ನಾವೂರಿನ ಕಾರಣಿಕ ಕ್ಷೇತ್ರ, ಸುಳ್ಯ ಜನತೆಯ ಆರಾಧ್ಯ ಕ್ಷೇತ್ರ ಶ್ರೀ ಕಲ್ಕುಡ ದೈವಸ್ಥಾನದಲ್ಲಿ ಭಕ್ತಿ ಸಂಭ್ರಮದ ನೇಮೋತ್ಸವ. ಇಂದು ಬೆಳಿಗ್ಗೆ 6 ಗಂಟೆಯಿಂದ ಆರಂಭಗೊಂಡ ನೇಮೋತ್ಸವದಲ್ಲಿ ಶ್ರೀ
ಕಲ್ಕುಡ ಹಾಗು ಕಲ್ಲುರ್ಟಿ ದೈವಗಳು ನೆರೆದ ಭಕ್ತರನ್ನು ಹರಸಿತು. ಕಲ್ಕುಡ, ಕಲ್ಲುರ್ಟಿ ದೈವಗಳ ನೇಮ ನಡೆದು ಪ್ರಸಾದ ವಿತರಣೆಯ ಬಳಿಕ ಶ್ರೀ ಗುಳಿಗ ದೈವದ ನೇಮೋತ್ಸವ ನಡೆಯಲಿದೆ. ನೇಮೋತ್ಸವಕ್ಕೆ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.ಕ್ಷೇತ್ರದಲ್ಲಿ ಹರಕೆ ಅಗೇಲು ಫೆ.19 ಹಾಗು ಮಾ.12ರಂದು ನಡೆಯಲಿದೆ. ಹರಕೆ ಅಗೇಲಯ ಕೊಡಲು ಇಚ್ಛಿಸುವವರು ಇಂದು ಸಂಜೆ 5 ಗಂಟೆಯ ಒಳಗೆ ರಶೀದಿ ಪಡೆದುಕೊಳ್ಳಬಹುದು ಎಂದು ಕಲ್ಕುಡ ದೈವಸ್ಥಾನದ ಪ್ರಕಟಣೆ ತಿಳಿಸಿದೆ.