ಸಂಪಾಜೆ: ಸಂಪಾಜೆ ಗ್ರಾಮದ ಬಂಟೋಡಿ ಕಿಲಾರ್, ನೆಲ್ಲಿಕುಮೆರಿ ಬೈಲೆ ಪರಿಸರದಲ್ಲಿ ಕಾಡಾನೆ ದಾಳಿ ಮುಂದುವರಿದಿದೆ. ಕಾಡಾನೆಗಳ ಹಿಂಡು ಪದೇ ಪದೇ ನಾಡಿಗೆ ಬಂದು ಕೃಷಿ ಹಾನಿ ಮಾಡುತಿದೆ. ನಿನ್ನೆ ಬಂಟೋಡಿ ಭಾಗದಲ್ಲಿ ವ್ಯಾಪಕವಾಗಿ ಹಾನಿ ಮಾಡಿದೆ. ಕಳೆದ ಅನೇಕ ದಿನಗಳಿಂದ ಈ ಭಾಗದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡು ನಾಡಿಗೆ ನುಗ್ಗಿ ತೆಂಗು, ಕಂಗು, ಬಾಳೆ ಮತ್ತಿತರ ಕೃಷಿಯನ್ನು ನಾಶಪಡಿಸುತಿದೆ. ವಸತಿ ಪ್ರದೇಶದ ಸಮೀಪದಲ್ಲಿಯೇ ಬೀಡು ಬಿಟ್ಟು ಮನೆ ಸಮೀಪದವರೆಗೆ ಬಂದು ಕೃಷಿ ಹಾನಿ ಮಾಡುವ ಆನೆಗಳ ಹಿಂಡು ಭೀತಿ ಹುಟ್ಟಿಸಿದೆ.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.









