ಪಂಜ:ಪಂಜ ಗರಡಿಬೈಲ್ ಶ್ರೀ ಉಳ್ಳಾಕುಲು, ಕಾಚು ಕುಜುಂಬ ದೈವಸ್ಥಾನದಲ್ಲಿ ಸ್ವರ್ಣ ಪ್ರಶ್ನಾ ಚಿಂತನೆಯು ದೈವಜ್ಞರ ನೇತೃತ್ವದಲ್ಲಿ ನಾಳೆ(ಏ.6) ಸೋಮವಾರ ಪೂರ್ವಹ್ನ 10ರಿಂದ ನಡೆಯಲಿದೆ. ಭಕ್ತಾದಿಗಳು ಆಗಮಿಸಬೇಕಾಗಿ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









