ಸುಳ್ಯ:ಸುಳ್ಯದಲ್ಲಿ ನಡೆಯುತ್ತಿರುವ ಪ್ರೊ ಮಾದರಿಯ ರಾಷ್ಟ್ರೀಯ ಕಬಡ್ಡಿ ಪಂದ್ಯಾಟಕ್ಕೆ ಅದ್ದೂರಿ ಚಾಲನೆ ದೊರೆತಿದೆ. ಮೊದಲ ಪಂದ್ಯದಲ್ಲಿ ತಮಿಳುನಾಡು ಈರೋಡ್ನ ಪೆರಿಯಾರ್ ಸ್ಪೋರ್ಟ್ಸ್ ಕ್ಲಬ್ ಎಕೆಎಂಸಿ ಗೋಬಿ ಮತ್ತು ಯೇನೆಪೋಯ ಯೂನಿವರ್ಸಿಟಿ ತಂಡದ ಮಧ್ಯೆ ಮೊದಲ ಪಂದ್ಯ ಆರಂಭಗೊಂಡಿದೆ. ಮೊದಲ ದಿನ ಎಂಟು ಪಂದ್ಯಗಳು ನಡೆಯಲಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ


ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ನ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ, ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆ, ಉದ್ಯಮಿ ಅಶ್ರಫ್ ಕಮ್ಮಾಡಿ,
ಕಬಡ್ಡಿ ಸಂಘಟನಾ ಸಮಿತಿಯ ಅಧ್ಯಕ್ಷ ಸಂಶುದ್ದೀನ್ ಭಾರತ್ ಶಾಮಿಯಾನ,ಪದಾಧಿಕಾರಿಗಳಾದ ಜಿ.ಜಿ.ನಾಯಕ್, ಎಸ್.ಪಿ.ಲೋಕನಾಥ್, ಗುರುದತ್ ನಾಯಕ್, ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಶಿವಪ್ರಕಾಶ್ ಪದಾಧಿಕಾರಿಗಳಾದ ಜಿ.ಎ.ಮಹಮ್ಮದ್ ಕುಂಞಿ ಸಹನಾ, ಶಾಫಿ ಪ್ರಗತಿ, ಜಯಪ್ರಕಾಶ್, ಪ್ರಮುಖರಾದ

ಎನ್.ಎ.ರಾಮಚಂದ್ರ, ಎಸ್.ಎನ್.ಮನ್ಮಥ, ನಿತ್ಯಾನಂದ ಮುಂಡೋಡಿ, ಪಿ.ಸಿ.ಜಯರಾಮ, ಟಿ.ಎಂ.ಶಹೀದ್ ತೆಕ್ಕಿಲ್, ಎಸ್.ಸಂಶುದ್ದೀನ್, ಕೆ.ಎಂ.ಮುಸ್ತಫ, ಅಬೂಬಕ್ಕರ್ ಅಡ್ಕಾರ್, ನ.ಪಂ.ಸದಸ್ಯರಾದ ಶಿಲ್ಪಾ ಸುದೇವ್, ಕಿಶೋರಿ ಶೇಟ್, ಎಂ.ವೆಂಕಪ್ಪ ಗೌಡ, ಅಬೂಬಕ್ಕರ್ ಅಡ್ಕಾರ್, ಪಿ.ಬಿ.ಸುಧಾಕರ ರೈ, ಸಂತೋಷ್ ಜಾಕೆ, ಕೆ.ಟಿ.ವಿಶ್ವನಾಥ, ಹರೀಶ್ ಉಬರಡ್ಕ, ದೊಡ್ಡಣ್ಣ ಬರೆಮೇಲು, ಬಿ.ಕೆ.ಮಾಧವ, ಆದಂ ಹಾಜಿ ಕಮ್ಮಾಡಿ, ಮೂಸಾ ಕುಂಞಿ ಪೈಂಬೆಚ್ಚಾಲ್, ಎ.ಸಿ.ವಸಂತ, ಎಸಿಎಫ್ ಪ್ರವೀಣ್ ಶೆಟ್ಟಿ, ವಲಯ ಅರಣ್ಯಾಧಿಕಾರಿಗಳಾದ ಎನ್.ಮಂಜುನಾಥ್, ಗಿರೀಶ್ ಆರ್, ನವೀನ್ ಸಂತೃಪ್ತಿ, ಇಬ್ರಾಹಿಂ ಗಾಂಧಿನಗರ ಮತ್ತಿತರರು ಉಪಸ್ಥಿತರಿದ್ದರು.









