ಸುಳ್ಯ: ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ವತಿಯಿಂದ ಸುಳ್ಯದಲ್ಲಿ ನ.17,18 ಮತ್ತು 19 ರಂದು ನಡೆಯುವ ರಾಷ್ಟ್ರೀಯ ಎ ಗ್ರೇಡ್ ಕಬಡ್ಡಿ ಚಾಂಪಿಯನ್ ಶಿಪ್ ಉದ್ಘಾಟನೆಗೆ ಆಗಮಿಸುವಂತೆ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದ ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರವರನ್ನು ಆಹ್ವಾನಿಸಲಾಯಿತು.ರಾಷ್ಟ್ರೀಯ ಕಬಡ್ಡಿ
ಸಂಘಟನಾ ಸಮಿತಿಯ ಅಧ್ಯಕ್ಷ ಜಿ.ಪಿ.ಸಂಶುದ್ದೀನ್ ಭಾರತ್ ಶಾಮಿಯಾನ ಹಾಗೂ ಇತರ ಪದಾಧಿಕಾರಿಗಳು ಆಮಂತ್ರಣ ನೀಡಿ ಆಹ್ವಾನಿಸಲಾಯಿತು. ರಾಷ್ಟ್ರೀಯ ಕಬಡ್ಡಿ ಸಂಘಟನಾ ಸಮಿತಿಯ ಕಾರ್ಯದರ್ಶಿ ಗುರುದತ್ ನಾಯಕ್, ಉಪಾಧ್ಯಕ್ಷ ಶಾಫಿ ಪ್ರಗತಿ, ಖಜಾಂಜಿ ಜಿ.ಎ.ಮಹಮ್ಮದ್ ಮತ್ತಿತರರು ಸಚಿವರನ್ನು ಆಹ್ವಾನಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಸುಳ್ಯ ನಗರ ಪಂಚಾಯತ್ ಸದಸ್ಯ ಎಂ.ವೆಂಕಪ್ಪ ಗೌಡ, ಜಿ.ಕೃಷ್ಣಪ್ಪ, ರಕ್ಷಿತ್ ಶಿವರಾಂ ಮತ್ತಿತರರು ಉಪಸ್ಥಿತರಿದ್ದರು.









