ಸುಳ್ಯ:ದಕ್ಷಿಣ ಕನ್ನಡ, ಉಡುಪಿ ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ಮುಸ್ಲಿಂ ಶೈಕ್ಷಣಿಕ ಸಂಸ್ಥೆಗಳ ಒಕ್ಕೂಟದ 2025- 2027 ನೇ ಸಾಲಿನ ಹಿರಿಯ ಉಪಾಧ್ಯಕ್ಷರಾಗಿ ಕೆ. ಎಂ. ಮುಸ್ತಫ ಸುಳ್ಯ ಪುನರಾಯ್ಕೆಯಾಗಿದ್ದಾರೆ.ಮಂಗಳೂರು ಪಡೀಲ್ನಲ್ಲಿರುವ
ಬರಖಾ ಸಭಾಂಗಣದಲ್ಲಿ ಜರಗಿದ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.ಗೌರವಾಧ್ಯಕ್ಷ ಉಮ್ಮರ್ ಟಿ.ಕೆ. ಯವರ ಅಧ್ಯಕ್ಷತೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.ಸುಳ್ಯ ನಗರ ಯೋಜನಾ ಪ್ರಾಧಿಕಾರ ( ಸೂಡ ) ಇದರ ಅಧ್ಯಕ್ಷ ರಾಗಿರುವ ಮುಸ್ತಫ ಗಾಂಧಿನಗರ ಜುಮ್ಮಾಮಸ್ಜಿದ್ ಮಾಜಿ ಅಧ್ಯಕ್ಷರಾಗಿದ್ದರು. ಇಂಡಿಯನ್ ರೆಡ್ ಕ್ರಾಸ್ ಸುಳ್ಯ ಘಟಕ ಉಪ ಸಭಾಪತಿ ಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.





