ಸುಳ್ಯ:ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಜಯಪ್ರಕಾಶ್ ಕುಂಚಡ್ಕ ಹಾಗೂ ಉಪಾಧ್ಯಕ್ಷರಾಗಿ ಹರಿಪ್ರಸಾದ್
ಕಾಪುಮಲೆ ಅವಿರೋಧವಾಗಿ ಆಯ್ಕೆಯಾದರು.ಇತ್ತೀಚೆಗೆ ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಅಭ್ಯರ್ಥಿಗಳು 11 ಸ್ಥಾನ ಹಾಗೂ ಕಾಂಗ್ರೆಸ್ ಬೆಂಬಲಿತರು ಒಂದು ಸ್ಥಾನದಲ್ಲಿ
ಜಯ ಗಳಿಸಿದ್ದರು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಒಂದೊಂದೇ ನಾಮಪತ್ರ ಇದ್ದ ಕಾರ ಅವಿರೋಧ ಆಯ್ಕೆ ನಡೆಯಿತು.
ಸಂಘದ ನಿರ್ದೇಶಕರಾದ ಶ್ರೀಪತಿ ಭಟ್ ಮಜಿಗುಂಡಿ,
ಕರುಣಾಕರ ಹಾಸ್ಪಾರೆ, ಸುಧಾಕರ ಆಲೆಟ್ಟಿ, ಧರ್ಮಪಾಲ ಕೊಯಿಂಗಾಜೆ,
ಚಿದಾನಂದ ಕೋಲ್ಚಾರು,ವಿದ್ಯಾ ಕುಡೆಕಲ್ಲು,ಉಷಾ ಪಾಲಡ್ಕ,
ಉಮೇಶ್ ನಾಯ್ಕ್ ಮಜಿಗುಂಡಿ, ಗಂಗಾಧರ ಬಿ.ಕೆ ಬಡ್ಡಡ್ಕ,ರಾಮದಾಸ ಮೊರಂಗಲ್ಲು ಉಪಸ್ಥಿತರಿದ್ದರು.
ಚುನಾವಣಾಧಿಕಾರಿ ವಿಲಾಸ್ ರವರು ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ವಲಯ ಮೇಲ್ವಿಚಾರಕ ಪ್ರತಾಪ್ ಉಪಸ್ಥಿತರಿದ್ದರು.