ಸುಳ್ತ: ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀ ವೆಂಕಟರಮಣ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಸುಳ್ಯ ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಡಾ.ಕೆ. ಟಿ. ವಿಶ್ವನಾಥ ಅವರನ್ನು ಜ್ಞಾನ ಮಂದಾರ ಶೈಕ್ಷಣಿಕ, ಸಾಂಸ್ಕೃತಿಕ ಟ್ರಸ್ಟ್ ಬೆಂಗಳೂರು -ಮಂಗಳೂರು ಇದರ ವತಿಯಿಂದ ಸನ್ಮಾನಿಸಲಾಯಿತು.ನ. 15ರಂದು ಸಂಘದ

ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಸಂಸ್ಥೆಯ ಸಂಸ್ಥಾಪಕರಾದ ಸೋಮಶೇಖರ್ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಶ್ರೀ ವೆಂಕಟರಮಣ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಪಿ.ಸಿ. ಜಯರಾಮ, ಉಪಾಧ್ಯಕ್ಷ ಮೋಹನ್ ರಾಮ್ ಸುಳ್ಳಿ, ನಿರ್ದೇಶಕರಾದ ಕೆ.ಸಿ. ಸದಾನಂದ, ಪಿ. ಎಸ್. ಗಂಗಾಧರ, ದಿನೇಶ್ ಮಡಪ್ಪಾಡಿ,ಸಂಸ್ಥೆಯ ಸಿಬ್ಬಂದಿಗಳಾದ ಯಂ.ಚಂದ್ರಶೇಖರ, ಕುಸುಮಾಧರ, ಮನೋಜ್ ಪಾನತ್ತಿಲ, ಜಗದೀಶ್ ಕೆ.ಆರ್.,ಕಾರ್ತಿಕ್,ಸುರೇಶ್ ಎಂ.ಮತ್ತು ಟಾಟಾ ಎಐಜಿ ಇನ್ಸೂರೆನ್ಸ್ ಕಂಪೆನಿಯ ಸಲಹೆಗಾರರಾದ ರಾಜು ಸೂರ್ಯ ಮತ್ತು ಹರ್ಷ ಎಂ.ಆರ್.ಉಪಸ್ಥಿತರಿದ್ದರು.









