ಸುಳ್ಯ:ಜಟ್ಟಿಪಳ್ಳದ ಹಯಾತುಲ್ ಇಸ್ಲಾಂ ಕಮಿಟಿಯ ವತಿಯಿಂದ ಜಲಾಲಿಯ್ಯ ವಾರ್ಷಿಕ ಕಾರ್ಯಕ್ರಮ ಮತ್ತು ದುವಾ ಮಜ್ಲಿಸ್ ಕಾರ್ಯಕ್ರಮ ಮಾ.4ರಂದು ಜಟ್ಟಿಪಳ್ಳ ಬುಸ್ತಾನುಲ್ ಉಲೂಂ ಮದರಸ ವಠಾರದಲ್ಲಿ ನಡೆಯಲಿದೆ ಎಂದು ಜಟ್ಟಿಪಳ್ಳ ಹಯಾತುಲ್ ಇಸ್ಲಾಂ ಕಮಿಟಿಯ ಮಾಜಿ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಸ್ಸಯ್ಯದ್ ಜಹಫರ್ ಸ್ವಾದಿಕ್ ತಂಙಳ್ ಕುಂಬೋಳ್ ಅವರು
ಜಲಾಲಿಯ್ಯ ರಾತೀಬ್ ನೇತೃತ್ವ ವಹಿಸುವರು. ಸಯ್ಯದ್ ಕುಂಞಿಕೋಯ ತಂಙಳ್ ಸಅದಿ ಸುಳ್ಯ ಕಾರ್ಯಕ್ರಮ ಉದ್ಘಾಟಿಸುವರು. ಜಟ್ಟಿಪಳ್ಳ ಹಯಾತುಲ್ ಇಸ್ಲಾಂ ಕಮಿಟಿ ಅಧ್ಯಕ್ಷ ಹಾಜಿ ಮುಹಮ್ಮದ್ ಎಸ್.ಎ.ಎಸ್ ಅಧ್ಯಕ್ಷತೆ ವಹಿಸಲಿದ್ದಾರೆ. ಬಿಯುಎಂ ಜಟ್ಟಿಪಳ್ಳ ಸದರ್ ಮುಹಲ್ಲಿಂ ಬದ್ರುಲ್ ಮುನೀರ್ ಹನೀಫಿ, ಬಿ.ಯು.ಎಂ ಜಟ್ಟಿಪಳ್ಳ ಸಹ ಅಧ್ಯಾಪಕ ಶಫೀಕ್ ಸಅದಿ ಗೌರವ ಉಪಸ್ಥಿತರಿರುವರು.
ಹಿರಿಯರಾದ ಹಾಜಿ ಇಸಾಕ್ ಹಾಜಿ ಅವರಿಗೆ ವಿಶೇಷ ಸನ್ಮಾನ ನಡೆಯಲಿದೆ. ಸಮಾಜಮುಖಿಯಾಗಿ ಕೆಲಸ ಮಾಡಿದ ಪ್ರಮುಖರನ್ನು ಸನ್ಮಾನಿಸಲಾಗುವುದು. ಸಮಾರಂಭದಲ್ಲಿ ರಾಜಕೀಯ, ಧಾರ್ಮಿಕ, ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.ಹಯಾತುಲ್ ಇಸ್ಲಾಂ ಕಮಿಟಿಯ ವತಿಯಿಂದ ಕಳೆದ 17 ವರ್ಷಗಳಿಂದ ಜಲಾಲಿಯ್ಯ ವಾರ್ಷಿಕ ಕಾರ್ಯಕ್ರಮ ಮತ್ತು ದುವಾ ಮಜ್ಲಿಸ್ ನಡೆಯುತಿದೆ ಎಂದು ಶರೀಫ್ ಜಟ್ಟಿಪಳ್ಳ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಜಟ್ಟಿಪಳ್ಳ ಹಯಾತುಲ್ ಇಸ್ಲಾಂ ಕಮಿಟಿ ಅಧ್ಯಕ್ಷ ಹಾಜಿ ಮುಹಮ್ಮದ್ ಎಸ್.ಎ.ಎಸ್, ಗೌರವಾಧ್ಯಕ್ಷ ಅಬೂಬಕ್ಕರ್ ಕೆ.ಎ,
ಮಾಜಿ ಅಧ್ಯಕ್ಷರಾದ ಬಶೀರ್ ಕ್ವಾಲಿಟಿ, ರಶೀದ್ ಜಟ್ಟಿಪಳ್ಳ, ಜಲಿಲಿಯಗಯ ಕಾರ್ಯಕ್ರಮದ ಉಸ್ತುವಾರಿ ಎನ್.ಎ.ಅಬ್ದುಲ್ಲಾ, ಸಹ ಉಸ್ತುವಾರಿ ಮಹಮ್ಮದ್ ಆಲಿ ಉಪಸ್ಥಿತರಿದ್ದರು.