ಪಂಜ: ಪಂಜದ ಅಳ್ಪೆ ಚಿಂಗಾಣಿಗುಡ್ಡೆ ಶ್ರೀ ಉಳ್ಳಾಕುಲು, ಉಳ್ಳಾಲ್ತಿ, ಮಹಿಷಂತಾಯ ಹಾಗೂ ಪರಿವಾರ ದೈವಗಳ ದೈವಸ್ಥಾನದ 2025 ನೇ ಸಾಲಿನ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಶ್ರೀ ಉಳ್ಳಾಕುಲು ಉಳ್ಳಾಲ್ತಿ ದೇವಸ್ಥಾನದ ವಠಾರದಲ್ಲಿ ನಡೆಯಿತು. ಧರ್ಮಶ್ರೀ ಕಾಂಪ್ಲೆಕ್ಸ್ ಪಂಜ ಇದರ ಮ್ಹಾಲಕರಾದ
ಅಶೋಕ್ ಮೇಲ್ಪಾಡಿ ಇವರು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ಮುಖ್ಯ ಅತಿಥಿಗಳಾಗಿ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರು ಉಪಸ್ಥಿತರಿದ್ದರು. ಶ್ರೀ ಉಳ್ಳಾಕುಲು ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಭರತ್ ರಾಮತೋಟ, ಉತ್ಸವ ಸಮಿತಿಯ ಅಧ್ಯಕ್ಷ ಕುಸುಮಾಧರ ಕೆರೆಯಡ್ಕ, ಪ್ರಧಾನ ದೈವ ಪರಿಚಾರಕರಾದ ಚಂದ್ರಶೇಖರ ಕೋಡಿ ಹಾಗೂ ಆಡಳಿತ ಮಂಡಳಿ ಮತ್ತು ಉತ್ಸವ ಸಮಿತಿಯ ಪದಾಧಿಕಾರಿಗಳು ಹಾಗೂ ಊರಿನ ಸಾರ್ವಜನಿಕರು ಉಪಸ್ಥಿತರಿದ್ದರು.