ಮಂಗಳೂರು: ಜಾನುವಾರುಗಳ ಆಕಸ್ಮಿಕ ಮರಣದಿಂದ ರೈತರು ಎದುರಿಸುವ ಆರ್ಥಿಕ ಸಂಕಷ್ಟ ನಿವಾರಣೆಗೆ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಲ್ಲಿ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಉಳಿಕಿಯಾಗಿರುವ ಅನುದಾನದಲ್ಲಿ ಜಾನುವಾರುಗಳಿಗೆ
ವಿಮೆ ಒದಗಿಸಲಾಗುವುದು.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿದ ರೈತರು ಸ್ಥಳೀಯ ಪಶು ವೈದ್ಯರನ್ನು ಸಂಪರ್ಕಿಸಿ ತಮ್ಮ ಹಸು, ಎಮ್ಮೆ, ಕೋಣ, ಎತ್ತು, ಆಡು, ಮೊಲ, ಹಂದಿಗಳಿಗೆ 1ವರ್ಷ, 2 ವರ್ಷ, ಅಥವಾ 3 ವರ್ಷಗಳ ಅವಧಿಗೆ ಜೀವ ವಿಮೆ ಮಾಡಿಸಬಹುದಾಗಿದೆ.ವಿಮೆಯ ಪ್ರೀಮಿಯಂ ಮೊತ್ತದಲ್ಲಿ ಶೇ.70ರಷ್ಟು ಸಹಾಯಧನ ಇಲಾಖೆಯಿಂದ ಒದಗಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಪಶು ವೈದ್ಯಾಧಿಕಾರಿಗಳು ಅಥವಾ ಗ್ರಾಮ ಪಂಚಾಯತ್ ಮಟ್ಟದಲ್ಲಿರುವ ಪಶು ಸಖಿಯರನ್ನು ಸಂಪರ್ಕಿಸುವಂತೆ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









