ಸುಳ್ಯ: ಬೆಳ್ಳಾರೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಜನತಾ ದರ್ಶನ ಕಾರ್ಯಕ್ರಮದಲ್ಲಿ ದಕ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರಿಗೆ ಪೆರುವಾಜೆ ಗ್ರಾಮ ಪಂಚಾಯಿತಿ ಸದಸ್ಯ ಸಚಿನ್ ರಾಜ್ ಶೆಟ್ಟಿ ಮನವಿ
ಸಲ್ಲಿಸಿದ್ದಾರೆ. ಪೆರುವಾಜೆ ಗ್ರಾಮ ಕ್ಕೆ ಗ್ರಾಮ ಸಹಾಯಕ, ಸುಳ್ಯ ಇಂದಿರಾ ಕ್ಯಾಂಟಿನ್ ಗೆ ತಾಲೂಕು ಕಚೇರಿ ಮುಂಭಾಗ ಗದಿಂದ ದಾರಿ ವ್ಯವಸ್ಥೆ, ಪೆರುವಾಜೆ ಗ್ರಾಮದ ಮುರ್ಕೆತ್ತಿಗೆ ಟ್ರಾನ್ಸ್ ಪಾರ್ಮರ್ ಹಾಗೂ ಹಳೆಯ ತಂತಿ ಬದಲಾವಣೆ, ಸಬ್ ರಿಜಿಸ್ಟ್ರಾರ್ ಕಚೇರಿಯ ಆನ್ ಲೈನ್ ಸೇವೆ ಸುಗಮವಾಗಿ ನಡೆಯುವಂತೆ ಮತ್ತಿತರ ಬೇಡಿಕೆಗಳ ಮನವಿ ಸಲ್ಲಿಸಲಾಯಿತು.









