ಸುಳ್ಯ:ಜೀವನದಲ್ಲಿ ಏನನ್ನಾದರೂ ಸಾಧಿಸಿ ತೋರಿಸುವ ಛಲವನ್ನು ಯುವ ಜನತೆ ಬೆಳೆಸಿಕೊಳ್ಳಬೇಕು, ಸೇವಾ ಚಟುವಟಿಕೆಗಳ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದ್ದಾರೆ.ಎನ್.ಎಸ್.ಎಸ್ ಸೇವಾ ಸಂಗಮ ಟ್ರಸ್ಟ್ ಇದರ ಸಾರಥ್ಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜ್ಯೋತಿ ಸರ್ಕಲ್ ಸುಳ್ಯ ಮತ್ತು ಎನ್.ಎಸ್.ಎಸ್ ಘಟಕ ಕೆವಿಜಿ ಪಾಲಿಟೆಕ್ನಿಕ್ ಕಾಲೇಜು ಸುಳ್ಯ ಇದರ ಸಹಕಾರದೊಂದಿಗೆ
ಸೇವಾ ಸಮ್ಮಿಲನ ಅಂಗವಾಗಿ ನಡೆದ ಮುಕ್ತ ಜನಪದ ಉತ್ಸವ ಮತ್ತು ರಾಜ್ಯಮಟ್ಟದ ನಾಯಕತ್ವ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಯುವಕ, ಯುವತಿಯವರು ಉತ್ತಮ ಭವಿಷ್ಯವನ್ನು ರೂಪಿಸಲು ಈ ರೀತಿಯ ಶಿಬಿರಗಳು ಸಹಕಾರಿ ಎಂದ ಅವರು ಪೋಷಕರ ನಿರೀಕ್ಷೆಗೆ ತಕ್ಕಂತೆ ಬದುಕಿ ಬಾಳಿ, ಅವರು ನೀಡುವ ಪ್ರೀತಿಯ ದುಪ್ಪಟ್ಟು ಪ್ರೀತಿಯನ್ನು ಅವರಿಗೆ ನೀಡಿ ಎಂದು ಹೇಳಿದರು. ಎನ್.ಎಸ್.ಎಸ್ ಸೇವಾ ಸಂಗಮ ಟ್ರಸ್ಟ್ನ ಗೌರವಾಧ್ಯಕ್ಷ
ಬಾಲಕೃಷ್ಣ ಬೊಳ್ಳೂರು ಅಧ್ಯಕ್ಷತೆ ವಹಿಸಿದ್ದರು. ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಸದಸ್ಯೆ ಶಿಲ್ಪಾ ಸುದೇವ್, ಟ್ರಸ್ಟ್ನ ಸಲಹಾ ಸಮಿತಿ ಸದಸ್ಯರಾದ ಚಂದ್ರಶೇಖರ ಸಿ ಬಿಳಿನೆಲೆ, ಡಾ.ಅನುರಾಧಾ ಕುರುಂಜಿ ಉಪಸ್ಥಿತರಿದ್ದರು.ಎನ್ಎಸ್ಎಸ್ ಸೇವಾ ಸಂಗಮ ಟ್ರಸ್ಟ್ನ ಅಧ್ಯಕ್ಷ ವಿಜೇತ್ ಶಿರ್ಲಾಲ್, ಕಾರ್ಯದರ್ಶಿ ವಿಶ್ವಕಿರಣ್ ಪದಾಧಿಕಾರಿಗಳಾದ
ರಕ್ಷಿತ್ ಬೊಳ್ಳೂರು, ಸುಶಾಂತ್ ಅಜ್ಜಿಕಲ್ಲು, ಜೀವನ್, ಕಿಶೋರ್, ಪ್ರಶಾಂತ್, ಯಶವಂತ್, ಲಕ್ಷ್ಮೀಶ ಪಿ.ಕೆ, ಗಗನ್ ಬೈಪಡಿತ್ತಾಯ, ಯಶ್ವಿತ್, ತೀರ್ಥೇಶ್, ಹಿತೇಶ್, ಪೂರ್ಣಿಮಾ ಮತ್ತಿತರರು ಉಪಸ್ಥಿತರಿದ್ದರು.

ರಾಜ್ಯಮಟ್ಟದ ನಾಯಕತ್ವ ಶಿಬಿರ:
ಎನ್ಎಸ್ಎಸ್ ಸೇವಾ ಸಂಗಮ ಟ್ರಸ್ಟ್ನ ವತಿಯಿಂದ ಎರಡು ದಿನಗಳ ಕಾಲ ನಡೆದ ನಾಯಕತ್ವ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕೃಷ್ಣಮೂರ್ತಿ,ಚಂದ್ರಶೇಖರ ಬಿಳಿನೆಲೆ,ಡಾ.ಅನುರಾಧಾ ಕುರುಂಜಿ, ಬಾಲಕೃಷ್ಣ ಬೊಳ್ಳೂರು ತರಬೇತಿ ನೀಡಿದರು. ಸಂವಹನ ಕೌಶಲ್ಯ, ಸ್ವವಿಶ್ಲೇಷಣೆ, ಸಮಯ ಪಾಲನೆ, ಗುರಿ ನಿರ್ಧಾರ, ಮಾನವೀಯ ಸಂಬಂಧಗಳು, ಸಮಸ್ಯೆ ಪರಿಹಾರ, ನಿರ್ಧಾರ ತೆಗೆದುಕೊಳ್ಳುವಿಕೆ, ಗುಂಪು ನಿರ್ವಹಣೆ ಮತ್ತಿತರ ವಿಷಯಗಳ ಬಗ್ಗೆ ತರಬೇತಿ ನೀಡಲಾಯಿತು.
ರಾಜ್ಯದ ವಿವಿಧ ಭಾಗಗಳಿಂದ 80ಕ್ಕೂ ಅಧಿಕ ಮಂದಿ ಶಿಬಿರಾರ್ಥಿಗಳು ಎರಡು ದಿನದ ಶಿಬಿರದಲ್ಲಿ ಭಾಗವಹಿಸಿದ್ದರು.
ಜನಪದ ಉತ್ಸವ:
ಜನಪದ ಉತ್ಸವ ಕಾರ್ಯಕ್ರಮದಲ್ಲಿ ವಿವಿಧ ತಂಡಗಳು ಭಾಗವಹಿಸಿದ್ದವು. ನಂದನ ಕಲಾ ಕುಟುಂಬ ಮೆಟ್ಟಿನಡ್ಕ ತಂಡ ಪ್ರಥಮ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ದ್ವಿತೀಯ ಸ್ಥಾನ ಪಡೆದುಕೊಂಡಿತು.