ಸುಳ್ಯ:ಮುಸ್ಲಿಂ ಭಾಂದವರು ರಂಜಾನ್ ಒಂದು ತಿಂಗಳ ಉಪವಾಸ ವೃತಾಚರಣೆಯ ಬಳಿಕ ಮಾ.31ರಂದು ಸಂಭ್ರಮದ ಈದ್ ಉಲ್ ಫಿತರ್ ಆಚರಿಸಿದರು. ಸುಳ್ಯ ಗಾಂಧಿನಗರ ಮುಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಈದುಲ್ ಫಿತರ್ ಹಬ್ಬದ ಸಲುವಾಗಿ ಈದ್ ಕುತುಬ ಮತ್ತು ಪಾರ್ಥನೆಯನ್ನು
ಖತೀಬರಾದ ಅಶ್ರಫ್ ಖಾಮಿಲ್ ಸಖಾಫಿ ಮಾಡಿದರು.
ಜಮಾಯತ್ ಅಧ್ಯಕ್ಷರಾದ ಹಾಜಿ ಮಹಮ್ಮದ್ ಕೆಎಂಎಸ್, ಸೂಡ ಅಧ್ಯಕ್ಷ ಹಾಜಿ ಕೆ.ಎಂ. ಮುಸ್ತಫಾ, ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್ ಕುತ್ತಮೊಟ್ಟೆ, ನಗರ ಪಂಚಾಯತ್ ಸದಸ್ಯರಾದ ಉಮ್ಮರ್ ಕೆ ಎಸ್,ರಿಯಾಜ್ ಕಟ್ಟೆಕ್ಕಾರ್, ಶರೀಫ್ ಕಂಠಿ,ಸಿದ್ದೀಕ್ ಕೊಕ್ಕೊ,ಅನ್ಸಾರ್ ಅಧ್ಯಕ್ಷ ಅಬ್ದುಲ್ಲಾ ಹಾಜಿ ಕಟ್ಟೆಕ್ಕಾರ್, ಅನ್ಸಾರಿಯಾ ಅಧ್ಯಕ್ಷ ಅಬ್ದುಲ್ ಮಜೀದ್ ಜನತಾ,ಪ್ರಧಾನ ಕಾರ್ಯದರ್ಶಿ ಲತೀಫ್ ಹರ್ಲಡ್ಕ ಮೊದಲಾದವರು ಉಪಸ್ಥಿತರಿದ್ದರು.
ಈದ್ ನಮಾಜ್ ಬಳಿಕ ಸೇರಿದವರಲ್ಲರೂ ಪರಸ್ಪರ ಹಸ್ತಲಾಘ ಮಾಡಿದರು.
ನಂತರ ಸಾಮೂಹಿಕ ಪಾರ್ಥನೆ ಮತ್ತು ಕಬರ್ ಝಿಯಾರತ್ ಕಾರ್ಯಕ್ರಮ ನಡೆಯಿತು. ನಂತರ ಮನೆ ಮನೆಗಳಿಗೆ ಭೇಟಿ ನೀಡಿ ಈದ್ ಸಂದೇಶ ನಿಡುವುದರ ಮೂಲಕ ಈದ್ ಆಚರಿಸಿದರು.