ಗೂನಡ್ಕ: ಕರ್ನಾಟಕ ಮುಸ್ಲಿಂ ಜಮಾಅತ್ ಗೂನಡ್ಕ ಯೂನಿಟ್ ಇದರ ಸಾಮಾನ್ಯ ಸಭೆಯು ಸುನ್ನಿ ಸೆಂಟರ್ ನಲ್ಲಿ ಅದ್ಯಕ್ಷರಾದ ಮುಹಮ್ಮದ್ ಕುಞಿ ಗೂನಡ್ಕ ರವರ ಅಧ್ಯಕ್ಷತೆಯಲ್ಲಿ ನಡೆಯಿತು.ನೂತನ ಅದ್ಯಕ್ಷರಾಗಿ ಎಸ್ ಎಂ ಅಬ್ದುಲ್ಲಾ ಮತ್ತು
ಸಹ ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್ ಕಲ್ನಾಡ್ ಆಯ್ಕೆಯಾದರು. ಈ ಹಿಂದೆ ಮುಹಮ್ಮದ್ ಕುಂಞಿ ಗೂನಡ್ಕ ಅವರು ಅದ್ಯಕ್ಷರಾಗಿದ್ದು ಅವರು ಗೂನಡ್ಕ ಜಮಾಅತ್ ಅಧ್ಯಕ್ಷರಾದ ಕಾರಣ ಯುನಿಟ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ತೆರವಾದ ಸ್ಥಾನಕ್ಕೆ ಎಸ್ ಎಂ ಅಬ್ದುಲ್ಲಾ ಅವರನ್ನು ಆಯ್ಕೆ ಮಾಡಲಾಯಿತು,ಈ ಹಿಂದೆ ಖಾಲಿ ಇದ್ದ ಸಹ ಕಾರ್ಯದರ್ಶಿ ಸ್ಥಾನಕ್ಕೆ ಅಬ್ದುಲ್ ಕಾದರ್ ಕಲ್ನಾಡ್ ರವರನ್ನು ಆಯ್ಕೆ ಮಾಡಲಾಯಿತು,
ಸಭೆಯಲ್ಲಿ ಯೂನಿಟ್ ಅದ್ಯಕ್ಷರು, ಪದಾಧಿಕಾರಿಗಳು ಹಾಜರಿದ್ದರು.
ಕಾರ್ಯದರ್ಶಿ ಟಿ ಬಿ ಅಬ್ದುಲ್ ಅಝೀಜ್ ಸ್ವಾಗತಿಸಿ ವಂದಿಸಿದರು.