ಸುಳ್ಯ: ಜಮೀಯ್ಯತುಲ್ ಫಲಾಹ್ ಸಂಸ್ಥೆಯ ಸುಳ್ಯ ತಾಲೂಕು ಘಟಕದ ವತಿಯಿಂದ 100 ಕುಟುಂಬಗಳಿಗೆ ಪವಿತ್ರ ರಂಜಾನ್ ಪ್ರಯುಕ್ತ ಆಹಾರ ಸಾಮಾಗ್ರಿ ಕಿಟ್ ವಿತರಣೆ ಕಾರ್ಯಕ್ರಮ ನಡೆಯಿತು.ಗಾಂಧಿನಗರ ಸಂಸ್ಥೆಯ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ
ಸುಮಾರು 2 ಲಕ್ಷ ಮೌಲ್ಯದ ಆಹಾರ ಸಾಮಾಗ್ರಿಗಳ ಕಿಟ್ಗಳನ್ನು
ವಿತರಿಸಲಾಯಿತು.ಸುಳ್ಯ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ.ಎಂ. ಮುಸ್ತಫ ಉದ್ಘಾಟಿಸಿದರು.ಜಮೀಯ್ಯತುಲ್ ಫಲಾಹ್ ಸುಳ್ಯ ತಾಲೂಕು ಘಟಕದ ಅಧ್ಯಕ್ಷ ಮೂಸಾ ಕುಂಞಿ ಪೈಂಬಚ್ಚಾಲ್ ಅಧ್ಯಕ್ಷತೆ
ವಹಿಸಿದ್ದರು. ಈ ಸಂದರ್ಭದಲ್ಲಿ
ಪದಾದಿಕಾರಿಗಳಾದ ಇಕ್ಬಾಲ್ ಎಲಿಮಲೆ, ಅಬೂಬಕ್ಕರ್ ಅಡ್ಕಾರ್, ಶಾಫಿ ಕುತ್ತಮೊಟ್ಟೆ,ಹಸೈನಾರ್ ವಳಲಂಬೆ,ಅಬ್ದುಲ್ ಖಾದರ್ ಸoಗಮ್,ಹಸೈನಾರ್ ಹಾಜಿ ಗೊರಡ್ಕ, ಇಬ್ರಾಹಿಂ ಹಾಜಿ ಕತ್ತರ್,
ಅಬೂಬಕ್ಕರ್ ಪಾರೆಕ್ಕಲ್, ಅಮೀರ್ ಕುಕ್ಕುಂಬಳ, ಎಸ್. ಪಿ ಅಬೂಬಕ್ಕರ್, ಡಾ. ಮಹಮ್ಮದ್ ಕುಂಭಕ್ಕೊಡು, ಇಬ್ರಾಹಿಂ ನೀರಬಿದಿರೆ ದುಗ್ಗಲಡ್ಕ,ಹಂಝ ದುಗ್ಗಲಡ್ಕ, ಎಸ್. ಕೆ. ಹನೀಫ್ ಕಲ್ಲುಗುಂಡಿ ಮೊದಲಾದವರು ಉಪಸ್ಥಿತರಿದ್ದರು






