ಸುಳ್ಯ:ಜಮೀಯ್ಯತ್ತುಲ್ ಫಲಾಹ್ ದ. ಕ. ಮತ್ತು ಉಡುಪಿ ಜಿಲ್ಲೆ ಇದರ ಸುಳ್ಯ ಘಟಕದ ವತಿಯಿಂದ ಡಿಸೆಂಬರ್ 20 ರಂದು ಸುಳ್ಯ ಅನ್ಸಾರಿಯಾ ಗಲ್ಫ್ ಆಡಿಟೋರಿಯಂನಲ್ಲಿ ನಡೆಯಲಿರುವ ಸ್ಕಾಲರ್ಶಿಪ್ ವಿತರಣೆ, ಪ್ರತಿಭಾ ಪುರಸ್ಕಾರ, ಮತ್ತು ಮಾದಕ ವ್ಯಸನಗಳ ವಿರುದ್ಧ
ಜನ ಜಾಗೃತಿ ಅಭಿಯಾನದ ಆಹ್ವಾನ ಪತ್ರ ಅನ್ಸಾರ್ ಕಾಂಪ್ಲೆಕ್ಸ್ನಲ್ಲಿರುವ ಜಮೀಯ್ಯತ್ತುಲ್ ಫಲಾಹ್ ಕಚೇರಿಯಲ್ಲಿ ಜರಗಿತು.ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ. ಎಂ. ಮುಸ್ತಫ ಬಿಡುಗಡೆ ಮಾಡಿದರು.ಈ ಸಂದರ್ಭದಲ್ಲಿ ಜೆ.ಎಫ್.ಉಪಾಧ್ಯಕ್ಷರಾದ
ಅಬ್ದುಲ್ ಖಾದರ್ ಸಂಗಮ್, ಹಾಜಿ ಇಬ್ರಾಹಿಂ ಕತ್ತರ್, ಪ್ರದಾನ ಕಾರ್ಯದ ರ್ಶಿ ಹಸೈನಾರ್ ವಳಲಂಬೆ,ಜತೆ ಕಾರ್ಯದರ್ಶಿ ಅಮೀರ್ ಕುಕ್ಕುಂಬಳ, ನಿರ್ದೇಶಕ ಎಸ್. ಪಿ. ಅಬೂಬಕ್ಕರ್ ಮೊದಲಾದವರು ಉಪಸ್ಥಿತರಿದ್ದರು.







