ಸುಳ್ಯ : ಸುಳ್ಯ ಶ್ರೀ ಚೆನ್ನಕೇಶವ ಜಾತ್ರೋತ್ಸವದ ಬಳಿಕ ನಡೆಯುವ ದೇವರ ಜಳಕೋತ್ಸವ ಪ್ರಯುಕ್ತ ಸುಳ್ಯ ಕಾಂತಮಂಲದ ಶ್ರೀ ಗುರು ರಾಘವೇಂದ್ರ ಮಠದಬೃಂದಾವನ ಸೇವಾ ಚಾರಿಟೇಬಲ್ ಟ್ರಸ್ಟ್ ಪರಿಸರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಸುಳ್ಯದ ದೀಪಂಜಲಿ ಭಜನಾ ಮಂಡಳಿ ವತಿಯಿಂದ ‘ಭಜನಾವಳಿ’ ಕಾರ್ಯಕ್ರಮ , ಶ್ರೀ ಗುರು ರಾಯರ ಮಕ್ಕಳ ಬಳಗದಿಂದ ‘ಗಾನ – ಯೋಗ – ನೃತ್ಯ ವೈಭವ’ ಹಾಗು
ಶ್ರೀ ಗಣಪತಿ ಕಲಾ ಕೇಂದ್ರ, ಸುಳ್ಯ ಇವರಿಂದ ‘ಭಕ್ತಿ ಸಂಗೀತ’ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ್ ಉದ್ಘಾಟನೆಯನ್ನು ರಾಯರ ಮಠದ ಪ್ರದಾನ ಅರ್ಚಕರಾದ ಶ್ರೀಹರಿ ಎಳಚಿತ್ತಾಯ ನೆರವೇರಿಸಿದರು.ಇವರೊಂದಿಗೆ ರಾಘವೇಂದ್ರ ಮಠದ ಅಧ್ಯಕ್ಷರಾದ ಎಂ. ಏನ್.ಶ್ರೀಕೃಷ್ಣ ಸೊಮಯಾಗಿ ಅಧ್ಯಕ್ಷತೆ ವಹಿಸಿದ್ದರು. ಖಜಾಂಜಿ ಮುರಳೀಕೃಷ್ಣ ಕಣ್ಣರಾಯ, ಬೃಂದಾವನ ಸೇವಾ ಚಾರಿಟೇಬಲ್ ಟ್ರಸ್ಟ್ ನ
ಟ್ರಸ್ಟಿಗಳಾದ ಪೆರಾಜೆ ವೇದವ್ಯಾಸ ತಂತ್ರಿಗಳು ಹಾಗು ಪ್ರಕಾಶ್ ಮೂಡಿತ್ತಾಯ, ಶಿವಳ್ಳಿ ಸಂಪನ್ನದ ಅಧ್ಯಕ್ಷ ರಾಮಕುಮಾರ್ ಹೆಬ್ಬಾರ್ ಮತ್ತು ಮಹಿಳಾ ಸಂಘದ ಕಾರ್ಯದರ್ಶಿ ರಂಜಿನಿ ಸೋಮಯಾಗಿ ಉಪಸ್ಥಿತರಿದ್ದರು.ಕಾರ್ಯಕ್ರಮದ ಅಂಗವಾಗಿ
ದೀಪಂಜಲಿ ಭಜನಾ ಮಂಡಳಿ ವತಿಯಿಂದ ‘ಭಜನಾವಳಿ’ ಶ್ರೀ ಗುರು ರಾಯರ ಬಳಗದಿಂದ ಭಕ್ತಿ ಗಾನ ನೃತ್ಯ. ಶ್ರೀ ಗಣಪತಿ ಕಲಾ ಕೇಂದ್ರ ಸುಳ್ಯ ಇವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು.