ಲಂಡನ್: ಎರಡನೇ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾದ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಶತಕ ಸಿಡಿಸಿದರೆ, ನೈಟ್ ವಾಚ್ಮೆನ್ ಆಕಾಶ್ ದೀಪ್, ರವೀಂದ್ರ ಜಡೇಜ, ವಾಷಿಂಗ್ಟನ್ ಸುಂದರ್ ಅವರ ಅರ್ಧ ಶತಕದ ನೆರವಿನಿಂದ ಭಾರತ ಎರಡನೇ ಇನ್ನೀಂಗ್ಸ್ನಲ್ಲಿ 396 ರನ್ ಗಳಿಸಿದೆ. ಆ ಮೂಲಕ ಇಂಗ್ಲೆಂಡ್ ಗೆಲುವಿಗೆ 374 ರನ್ ಗುರಿ ನೀಡಿದೆ. ಎರಡನೇ ಇನ್ನೀಂಗ್ಸ್ನಲ್ಲಿ
ಇತ್ತೀಚಿನ ವರದಿ ಬಂದಾಗ ಇಂಗ್ಲೆಂಡ್ ಒಂದು ವಿಕೆಟ್ ನಷ್ಟಕ್ಕೆ 50 ರನ್ ಗಳಿಸಿದೆ.ಯಶಸ್ವಿ ಜೈಸ್ವಾಲ್ ಆಕರ್ಷಕ ಶತಕ ಸಿಡಿಸಿದರೆ,
ಶುಕ್ರವಾರ ನೈಟ್ ವಾಚ್ಮೆನ್ ಆಗಿ ಕ್ರೀಸ್ಗೆ ಇಳಿದಿದ್ದ ಆಕಾಶ್ ದೀಪ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇಂಗ್ಲೆಂಡ್ ಬೌಲರ್ಗಳನ್ನು ಬಹುವಾಗಿ ಕಾಡಿದ ಅವರು12 ಬೌಂಡರಿ ಸಹೀತ 66 ರನ್ ಗಳಿಸಿ ಔಟಾದರು. ಮತ್ತೊಂದು ಕಡೆ ಜೈಸ್ವಾಲ್ ಸ್ಥಿರವಾಗಿ ನಿಂತು
ಬ್ಯಾಟ್ ಬೀಸಿದರು. ಅವರು ಅಮೋಘ ಶತಕ ಸಿಡಿಸುವ ಮೂಲಕ ತಂಡದ ಮುನ್ನಡೆಗೆ ಕಾರಣರಾದರು. ಜೈಸ್ವಾಲ್ 164 ಬಾಲ್ಗಳಲ್ಲಿ 118 ರನ್ ಸಿಡಿಸಿದ್ದಾರೆ. ಇದರಲ್ಲಿ 14 ಬೌಂಡರಿ 2 ಸಿಕ್ಸರ್ ಸೇರಿವೆ.
ರವೀಂದ್ರ ಜಡೇಜ 77 ಎಸೆತಗಳಲ್ಲಿ 53 ರನ್, ವಾಷಿಂಗ್ಟನ್ ಸುಂದರ್ 46 ಎಸೆತಗಳಲ್ಲಿ ತಲಾ 4 ಬೌಂಡರಿ, ಸಿಕ್ಸರ್ ನೆರವಿನಿಂದ 53 ರನ್ ಸಿಡಿಸಿದರು.ಉಳಿದಂತೆ ಗಿಲ್(11), ರಾಹುಲ್(7), ಸಾಯಿ ಸುದರ್ಶನ್(11), ಹಾಗೂ ಕರುಣ್ ನಾಯರ್(17) ಅಲ್ಪ ಮೊತ್ತಕ್ಕೆ ಬೌಟಾದರು.





