*ಗಂಗಾಧರ ಕಲ್ಲಪಳ್ಳಿ.
ಸುಳ್ಯ: ಭಾರತದ ಹೆಮ್ಮೆಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ ಇಸ್ರೋದ ಬಾಹ್ಯಾಕಾಶ ಲೋಕ ಸುಳ್ಯದಲ್ಲಿ ತೆರೆದು ಕೊಂಡಿದೆ. ಕಳೆದ 50 ವರ್ಷಗಳ ಇಸ್ರೋದ ಸಾಧನೆಗಳನ್ನು ಅನಾವರಣ ಮಾಡಿರುವ ‘ಸ್ಪೇಸ್ ಆನ್ ವ್ಹೀಲ್’ ಮೊಬೈಲ್ ಬಸ್ ವೈಜ್ಞಾನಿಕ ಕ್ಷೇತ್ರದ ಅಧ್ಭುತ ಲೋಕ ತೆರೆದಿಟ್ಟಿದೆ. ನವೆಂಬರ್ 7 ರಿಂದ 9 ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಚರಿಸಿರುತ್ತಿರುವ ಬಸ್ ನ.8ರಂದು ಸುಳ್ಯಕ್ಕೆ ಆಗಮಿಸಿದೆ. ಸುಳ್ಯದ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಬಸ್ನಲ್ಲಿ


ಪ್ರದರ್ಶನ ನಡೆಯುತಿದೆ. ದಕ್ಷಿಣ ಕನ್ನಡ ವಿಜ್ಞಾನ ಪ್ರತಿಷ್ಠಾನ ಮತ್ತು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಪ್ರೌಢ ಶಾಲಾ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮತ್ತು ಬಾಹ್ಯಾಕಾಶ ವಿಷಯಗಳಲ್ಲಿ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಇದರಲ್ಲಿ ಚಂದ್ರಯಾನ, ಮಂಗಳಯಾನ, ಆದಿತ್ಯ ಎಲ್ 1, ಶ್ರೀಹರಿ ಕೋಟಾದ ಸತೀಶ್ ಧವನ್ ರಾಕೆಟ್ ಉಡ್ಡಯನ ಕೇಂದ್ರ, ಸಂವಹನ ಉಪಗ್ರಹಗಳು, ಆರ್ಯಭಟ, ಭಾಸ್ಕರ ಮೊದಲಾದ ಈ ಹಿಂದಿನ ಉಪಗ್ರಹಗಳ ಮಾದರಿಗಳು, ಅದೇ ರೀತಿ ಮುಂದಿನ ಬಾಹ್ಯಾಕಾಶ ಯೋಜನೆ ಗಗನ್ಯಾನ 2024ರ ಮಾದರಿಗಳು ಹಾಗೂ ಇನ್ನಿತರ ಬಾಹ್ಯಾಕಾಶ ಯೋಜನೆಗಳ ಮಾದರಿಗಳು ವೀಕ್ಷಣೆಗೆ ಲಭ್ಯವಿದೆ.
1975ರಿಂದ 2023ರವರೆಗೆ ಇಸ್ರೋ ನಡೆಸಿದ ಸಾಧನೆಗಳ


ಹಿನ್ನೋಟವನ್ನು ಸಾದರಪಡಿಸಲಾಗಿದೆ.
ಎಸಿ ವೋಲ್ವೋ ಬಸ್ನ್ನು ಸ್ಪೇಸ್ ಆನ್ ವ್ಹೀಲ್ ಮೊಬೈಲ್ ಬಸ್ ಆಗಿ ಬದಲಾವಣೆ ಮಾಡಲಾಗಿದೆ. ಆರ್ಯಭಟ, ಮಂಗಳಯಾನ, ಚಂದ್ರಯಾನ 1, ಚಂದ್ರಯಾನ 2, ಚಂದ್ರಯಾನ 3, ,ಆದಿತ್ಯ ಎಲ್ 1, ರಾಕೆಟ್ಗಳು, ಕಮ್ಯುನಿಕೇಷನ್ ಉಪಗ್ರಹಗಳು,ಅರ್ತ್ ಅಬ್ಸರ್ವ್ ಸಾಟ್ಲೈಟ್ಗಳು, ನಾವಿಕ್ ಸಾಟ್ಲೈಟ್ ಮಾದರಿಗಳನ್ನು ಪ್ರದರ್ಶಿಸಲಾಗಿದೆ. ಹಿಂದಿನ ಸಧನೆ ಮಾತ್ರವಲ್ಲದೆ 2024 ರಲ್ಲಿ ಉಡ್ಡಯನ ಮಾಡುವ ಮಾನವ ಸಹಿತ ಗಗನಯಾನ್, ರಾಕೆಟ್ ಸ್ಪೇಸ್ ಸ್ಟೇಷನ್, ಶ್ರೀಹರಿ ಕೋಟಾದ ಉಡ್ಡಯನ ಕೇಂದ್ರದ ಮಾದರಿಗಳನ್ನು ಪ್ರದರ್ಶಿಸಲಾಗಿದೆ. ಅಬ್ದುಲ್ ಕಲಾಂ ಅವರ ಮೊದಲ ರಾಕೆಟ್ , ಪಿಎಸಎಲ್ವಿ, ಜಿಎಸ್ಎಲ್ವಿ, ಜಿಸಾಟ್ ರಾಕೆಟ್ ಮಾದರಿಗಳು,ರಾಕೆಟ್ನಲ್ಲಿ


ಉಪಗ್ರಹ ಇರಿಸುವ ವಿಧಾನಗಳ ಮಾದರಿಯನ್ನು ಪ್ರಸ್ತುತ ಪಡಿಸಲಾಗಿದೆ. 2040ರಲ್ಲಿ ಇಸ್ರೋ ವಿಜ್ಞಾನಿ ಚಂದ್ರನಲ್ಲಿ ಭಾರತದ ಧ್ವಜ ಹಾರಿಸುವ ಯೋಜನೆ ಇಸ್ರೋ ಮುಂದಿದೆ. ಅದರ ಮಾದರಿಯನ್ನು ಪ್ರದರ್ಶಿಸಲಾಗಿದೆ. ಒಟ್ಟಿನಲ್ಲಿ ಸಂಪೂರ್ಣ ಇಸ್ರೋ ಸಾಧನೆ ಇಲ್ಲಿ ಅನಾವರಣಗೊಂಡಿದೆ.

‘ಎಲ್ಲರೂ ಇಸ್ರೋಗೆ ಬಂದು ಇದನ್ನು ವೀಕ್ಷಿಸಲು ಸಾಧ್ಯವಿಲ್ಲ ಎಂಬ ನೆಲೆಯಲ್ಲಿ ಇಸ್ರೋದ ಸಾಧನೆಗಳನ್ನು ಜನರಿಗೆ, ವಿದ್ಯಾರ್ಥಿಗಳಿಗೆ ತಿಳಿಸಲು ಕಳೆದ ಮೂರು ವರ್ಷಗಳಿಂದ ಸ್ಪೇಸ್ ಆನ್ ವ್ಹೀಲ್ ಮೊಬೈಲ್ ಬಸ್ ಎಲ್ಲಡೆ ಪ್ರಯಾಣ ಮಾಡಿ ಪ್ರದರ್ಶನ ನಡೆಸಲಾಗುತ್ತಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಪ್ರಯಾಣಿಸಿ ಈ ರೀತಿ ಪ್ರದರ್ಶನ ನಡೆಸಲಾಗುತಿದೆ ಎಂದು ಇಸ್ರೋದ ವಿಜ್ಞಾನಿ ಶ್ರೀನಿವಾಸ್ ಹೇಳುತ್ತಾರೆ.
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಉಪಾಧ್ಯಕ್ಷೆ ಡಾ.ಅನುರಾಧಾ ಕುರುಂಜಿ ಉಪಸ್ಥಿತರಿದ್ದರು.
ವಿವಿಶ ಶಾಲೆಯ ವಿದ್ಯಾರ್ಥಿಗಳು, ಸಾರ್ವಜನಿಕರು ಪ್ರದರ್ಶನ ವೀಕ್ಷಿಸಿದರು.











