ತಿರುವನಂತಪುರ:ಇಶಾನ್ ಕಿಶನ್ ಅಬ್ಬರದ ಶತಕ, ನಾಯಕ ಸೂರ್ಯಕುಮಾರ್ ಯಾದವ್ ಆಕರ್ಷಕ ಅರ್ಧ ಶತಕ ಹಾಗೂ ಅರ್ಷದೀಪ್ ಸಿಂಗ್ ಉತ್ತಮ ಬೌಲಿಂಗ್ ಬಲದಿಂದ ಭಾರತ ತಂಡವು ಐದನೇ ಮತ್ತು ಕೊನೆಯ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ 46 ರನ್ಗಳ ಭರ್ಜರಿ ಜಯ ಗಳಿಸಿದೆ.ಶನಿವಾರ ಗ್ರೀನ್ಫೀಲ್ಡ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಇಶಾನ್ ಕಿಶನ್ ಅಬ್ಬರದ ಆಟದ ಬಲದಿಂದ 20 ಓವರ್ಗಳಲ್ಲಿ 5 ವಿಕೆಟ್ಗಳಿಗೆ 271 ರನ್ಗಳ ಬೃಹತ್ ಮೊತ್ತ ಪೆರಿಸಿತು. ಇಶಾನ್ (103; 43ಎ, 4X6, 6X10) ಮತ್ತು ನಾಯಕ ಸೂರ್ಯಕುಮಾರ್ ಯಾದವ್ (63; 30ಎ, 4X4, 6X6) ಮೂರನೇ ವಿಕೆಟ್ ಜೊತೆಯಾಟದಲ್ಲಿ 137 (57ಎಸೆತ) ರನ್ ಸೇರಿಸಿದರು. ಈ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡವು 19.4 ಓವರ್ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 225 ರನ್ ಗಳಿಸಿ ಸೋಲೊಪ್ಪಿಕೊಂಡಿದೆ.
ನ್ಯೂಜಿಲ್ಯಾಂಡ್ ಪರ ಫಿನ್ ಅಲ್ಲದೆ ನ್ 38 ಎಸೆತಗಳಲ್ಲಿ 80 ರನ್ ಸಿಡಿಸಿದರು. ಭಾರತದ ಪರಾರ್ಷದೀಪ್ ಸಿಂಗ್ 5 ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ 3 ವಿಕೆಟ್ ಪಡೆದರು.





