ದುಬೈ: ಆಸ್ಟ್ರೇಲಿಯಾ ತಂಡದ ಪ್ಯಾಟ್ ಕಮಿನ್ಸ್ ಹಾಗೂ ವೇಗಿ ಮಿಚೇಲ್ ಸ್ಟಾರ್ಕ್ ಅವರು ಐಪಿಎಲ್ ಹರಾಜಿನಲ್ಲಿ ದಾಖಲೆ ಮೊತ್ತಕ್ಕೆ ಹರಾಜಾಗಿದ್ದಾರೆ. ದುಬೈನಲ್ಲಿ ನಡೆಯುತ್ತಿರುವ ಹರಾಜುಪ್ರಕ್ರಿಯೆಯಲ್ಲಿ, ಸ್ಟಾರ್ಕ್ ಅವರಿಗೆ ಕೋಲ್ಕತ್ತ ನೈಟ್ರೈಡರ್ಸ್ ದಾಖಲೆಯ 24.75 ಕೋಟಿ ನೀಡಿದೆ. ಸನ್ರೈಸರ್ಸ್ ಹೈದರಾಬಾದ್ ತಂಡ ಕಮಿನ್ಸ್ಗೆ 20.5 ಕೋಟಿ ನೀಡಿದೆ. ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ 6.80 ಕೋಟಿಗೆ,
ಶ್ರೀಲಂಕಾದ ವನಿಂದು ಹಸರಂಗ 1.5 ಕೋಟಿಗೆ ಸನ್ರೈಸರ್ಸ್ ಹೈದರಾಬಾದ್ ಖರೀದಿಸಿದೆ. ನ್ಯೂಜಿಲೆಂಡ್ನ ರಚಿನ್ ರವೀಂದ್ರ 1.8 ಕೋಟಿಗೆ, ಭಾರತದ ಶಾರ್ದೂಲ್ ಠಾಕೂರ್ 4 ಕೋಟಿಗೆ ಚೆನ್ನೈ ಸೂಪರ್ ಕಿಂಗ್ಸ್ ಪಾಲಾಗಿದೆ.
ದಕ್ಷಿಣ ಆಪ್ರಿಕಾದ ಜೆರಾಲ್ಡ್ ಕೋಜಿ ಮುಂಬೈ ಇಂಡಿಯನ್ಸ್ 5 ಕೋಟಿಗೆ, ಭಾರತದ ಹರ್ಷಲ್ ಪಟೇಲ್: ಪಂಜಾಬ್ ಕಿಂಗ್ಸ್ 11.75 ಕೋಟಿಗೆ, ನ್ಯೂಜಿಲೆಂಡ್ನ ಡೆರಿಲ್ ಮಿಚೇಲ್ ಚೆನ್ನೈ ಸೂಪರ್ ಕಿಂಗ್ಸ್ 11 ಕೋಟಿಗೆ, ಇಂಗ್ಲೆಂಡ್ನ ಕ್ರಿಸ್ ವೋಕ್ಸ್ ಪಂಜಾಬ್ ಕಿಂಗ್ಸ್ 4.2 ಕೋಟಿಗೆ
ಖರೀದಿಸಿದೆ. ವೆಸ್ಟ್ ಇಂಡೀಸ್ನ ಅಲ್ಜಾರಿ ಜೋಸೆಫ್ ರಾಯಲ್ ಚಾಲೆಂಜರ್ಸ್ ಬೆಂಗಳೂರು 11.5 ಕೋಟಿಗೆ, ಭಾರತದ ಉಮೇಶ್ ಯಾದವ್ ಗುಜರಾತ್ ಟೈಟನ್ಸ್ 5.8 ಕೋಟಿಗೆ, ಭಾರತದ ಶಿವಂ ಮಾವಿ ಲಖನೌ ಸೂಪರ್ ಜೈಂಟ್ಸ್ 6.4 ಕೋಟಿಗೆ
ಖರೀದಿಸಿದೆ.














