ಸುಳ್ಯ:ಸುಳ್ಯ ಇನ್ನರ್ವೀಲ್ ಕ್ಲಬ್ಗೆ ಜಿಲ್ಲೆ 318ರ ಜಿಲ್ಲಾಧ್ಯಕ್ಷೆ ಪೂರ್ಣಿಮಾ ರವಿ ಇವರು ಅಧಿಕೃತ ಭೇಟಿ ನೀಡಿದರು. ಕ್ಲಬ್ ನ ಕಾರ್ಯ ಚಟುವಟಿಕೆಗಳನ್ನು ಪರಿಶೀಲಿಸಿದ ಅವರು ಇನ್ನರ್ ವೀಲ್ ಕ್ಲಬ್ ಸುಳ್ಯ ವತಿಯಿಂದ ಸಂದೀಪ್ ಶಾಲೆಗೆ ಕೊಡುಗೆಯಾಗಿ ನೀಡಿದ ಟಿವಿಯನ್ನು ಹಸ್ತಾಂತರಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ
ಅಜ್ಜಾವರದ ರಕ್ಷಿತ್ನ ವೈದ್ಯಕೀಯ ಶಿಕ್ಷಣಕ್ಕೆ ಧನಸಹಾಯವನ್ನು ಮಾಡಲಾಯಿತು. ಹಾಗೆಯೇ ಪ್ರತಿಕ್ಷಾ ಎಂಬವರಿಗೆ ಹೊಲಿಗೆ ತರಬೇತಿಗಾಗಿ ಸಹಾಯ ಧನ ಹಸ್ತಾಂತರ ಮಾಡಿದರು.ಕಾರ್ಯಕ್ರಮದಲ್ಲಿ ಇನ್ನರ್ ವೀರ್ ಸಂಚಿಕೆ ಇನ್ನರ್ ಸ್ಪೂರ್ತಿಯನ್ನು ಸುಳ್ಯ ರೋಟರಿ ಕ್ಲಬ್ ಇದರ ಅಧ್ಯಕ್ಷರಾದ ಆನಂದ ಖಂಡಿಗ ಅವರು ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಮೀನ ಸುಂದೆ ಪ್ರಾರ್ಥಿಸಿದರು. ಸೌಮ್ಯರವಿ ಪ್ರಸಾದ್ ಇನ್ನರ್ವೀಲ್ ಪ್ರಾರ್ಥನೆ ಮಾಡಿದರು.ಕಾರ್ಯಕ್ರಮದ ವೇದಿಕೆಯಲ್ಲಿ ಜಿಲ್ಲಾಧ್ಯಕ್ಷರಾದ ಪೂರ್ಣಿಮಾ ರವಿ, ಇನ್ನರ್ ವೀಲ್ ಕ್ಲಬ್ನ ಅಧ್ಯಕ್ಷೆ ಸವಿತಾ ನಾರ್ಕೋಡು, ಕಾರ್ಯದರ್ಶಿ ಚಿಂತನ ಸುಬ್ರಮಣ್ಯ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಇನ್ನರ್ ವೀಲ್ ಉಪಾಧ್ಯಕ್ಷೆ ಜಯಲಕ್ಷ್ಮಿ ಜೆ ರೈ ವಂದಿಸಿದರು. ಯೋಗಿತಾ ಗೋಪಿನಾಥ್ ಹಾಗೂ ಶೈಮಾ ಜಿತೇಂದ್ರ ಕಾರ್ಯಕ್ರಮವನ್ನು ನಿರೂಪಿಸಿದರು. ಬಳಿಕ ಮನೋರಂಜನ ಕಾರ್ಯಕ್ರಮ ನಡೆಯಿತು.