ಸೈಂಟ್ ಜಾರ್ಜ್ ಪಾರ್ಕ್ : ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ 46.2 ಓವರ್ ಗಳಲ್ಲಿ 211 ರನ್ ಗಳಿಗೆ ಆಲೌಟ್ ಆಗಿದೆ. ಭಾರತದ ಪರ ಆರಂಭಿಕ ಬ್ಯಾಟರ್ ಸಾಯ್ ಸುದರ್ಶನ್ ಹಾಗೂ ನಾಯಕ ಕೆ.ಎಲ್.ರಾಹುಲ್ ಅರ್ಧ ಶತಕ
ಬಾರಿಸಿದರು. ಸಾಯ್ ಸುದರ್ಶನ್ 83 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 62 ರನ್ ಬಾರಿಸಿದರು. ಕೆ.ಎಲ್.ರಾಹುಲ್ 64 ಎಸೆತಗಳಲ್ಲಿ 7ಬೌಂಡರಿ ನೆರವಿನಿಂದ 56 ರನ್ ಬಾರಿಸಿದರು. ಉಳಿದ ಬ್ಯಾಟರ್ಗಳು ನಿರಾಸೆ ಮೂಡಿಸಿದರು. ರಿಂಕು ಸಿಂಗತ 17, ಸಂಜು ಸ್ಯಾಮ್ಸನ್ 12, ಅರ್ಷದೀಪ್ ಸಿಂಗ್ 18 ರನ್ ಗಳಿಸಿದರು. ದಕ್ಷಿಣ ಆಫ್ರಿಕಾ ಪರ ನಂದ್ರೆ ಬರ್ಗರ್ 3, ಕೇಶವ್ ಮಹಾರಾಜ್, ಬ್ಯೂರನ್ ಹೆಂಡ್ರಿಕ್ಸ್ ತಲಾ ಎರಡು ವಿಕೆಟ್ ಪಡೆದರು.














