ಮುಂಬೈ:ಐಪಿಎಲ್ ಬಳಿಕ ಟೀಮ್ ಇಂಡಿಯಾ ಸರಣಿಗೆ ಬಿಸಿಸಿಐ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.ಎರಡು ತಿಂಗಳ ಐಪಿಎಲ್ ಬಳಿಕ ಟೀಂ ಇಂಡಿಯಾ ಐರ್ಲೆಂಡ್ ದೇಶದತ್ತ ಪಯಣ ಮಾಡಲಿದ್ದು, ಎರಡು ಟಿ20 ಸರಣಿ ನಡೆಯಲಿದೆ.ಐರ್ಲೆಂಡ್ನ
ಬೆಲ್ಫಾಸ್ಟ್ ನಲ್ಲಿ ಮ್ಯಾಚ್ ಗಳು ನಡೆಯಲಿದ್ದು, ಮೊದಲ ಪಂದ್ಯ ಜೂನ್ 26 ರಂದು ನಡೆದರೆ, ಎರಡನೇ ಪಂದ್ಯ ಜೂನ್ 28 ರಂದು ಆಡಲಿದೆ.
ಅದಕ್ಕೂ ಮುನ್ನ ಟೀಮ್ ಇಂಡಿಯಾ ಐಪಿಎಲ್ ಮುಗಿದ ಬೆನ್ನಿಗೆ ಅಫ್ಘಾನಿಸ್ತಾನ ವಿರುದ್ಧ ಜೂನ್ 6 ರಿಂದ ಜೂನ್ 20 ರವರೆಗೆ ಒಂದು ಟೆಸ್ಟ್ ಪಂದ್ಯ ಮತ್ತು ಮೂರು ಏಕದಿನ ಸರಣಿ ಆಡಲಿದೆ. ಅದಾದ ಬಳಿಕ ಐರ್ಲೆಂಡ್ ಪ್ರವಾಸ ಮಾಡಲಿದೆ.ಐರ್ಲೆಂಡ್ ಸರಣಿ ಮುಗಿದ ಬಳಿಕ ಭಾರತ ತಂಡ ಇಂಗ್ಲೆಂಡ್ಗೆ ತೆರಳಲಿದ್ದು, ಅಲ್ಲಿ ಐದು ಟಿ20 ಸರಣಿ ಮತ್ತು ಮೂರು ಏಕದಿನ ಪಂದ್ಯ ನಡೆಯಲಿದೆ.














