ಸುಳ್ಯ:ಮುಹಿಯ್ಯದ್ದೀನ್ ಜುಮಾ ಮಸ್ಜಿದ್ ತರ್ಬಿಯತುಲ್ ಇಸ್ಲಾಂ ಜಮಾಅತ್ ಕಮಿಟಿ ಗಾಂಧಿನಗರ ಹಾಗೂ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ ಗಾಂಧಿನಗರ ಸುಳ್ಯ ಇದರ ಸಹಯೋಗದಲ್ಲಿ ದಾನಿಗಳ ಸಹಕಾರದೊಂದಿಗೆ ಪವಿತ್ರ ರಂಝಾನ್ ತಿಂಗಳ ಪೂರ್ತಿ ನಡೆಯುವ ‘ಇಫ್ತಾರ್ ಕೂಟ’ ದ ಉದ್ಘಾಟನೆಯನ್ನು
ಖತೀಬರಾದ ಅಶ್ರಫ್ ಖಾಮಿಲ್ ಸಖಾಫಿ ಉಸ್ತಾದ್ ನೆರವೇರಿಸಿದರು. ತರ್ಬಿಯತುಲ್ ಇಸ್ಲಾಂ ಜಮಾಅತ್ ಕಮಿಟಿ ಅದ್ಯಕ್ಷರಾದ ಹಾಜಿ ಮಹಮ್ಮದ್ ಕೆಎಂಎಸ್ ಅಧ್ಯಕ್ಷತೆ ವಹಿಸಿದ್ದರು.
ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಹೀದ್ ತೆಕ್ಕಿಲ್, ಅನ್ಸಾರ್ ಕಮಿಟಿಯ ಅಧ್ಯಕ್ಷರಾದ ಹಾಜಿ ಎಸ್. ಅಬ್ದುಲ್ಲ ಕಟ್ಚೆಕ್ಕಾರ್, ಪ್ರಮುಖರಾದ ಸಂಶುದ್ದೀನ್, ಪಿ.ಎ ಮಹಮ್ಮದ್ ಉಪಸ್ಥಿತರಿದ್ದರು.ಜಮಾಅತ್ ಉಪಾದ್ಯಕ್ಷರಾದ ಅಬ್ದುಲ್ ಹಮೀದ್ ಬೀಜಕೊಚ್ಚಿ ಸ್ವಾಗತಿಸಿ ನಗರ ಪಂಚಾಯತ್ ಮಾಜಿ ಸದಸ್ಯರಾದ ಉಮ್ಮರ್ ಕೆ.ಎಸ್ ವಂದಿಸಿ ಕಾರ್ಯಕ್ರಮ ನಿರೂಪಿಸಿದರು. ಪದಾಧಿಕಾರಿಗಳಾದ
ಜುನೈದ್ ಎನ್.ಎ , ಶಹೀದ್ ಪಾರೆ, ಹನೀಫ್ ಬಿ.ಯಂ, ಕೆ. ಬಿ ಇಬ್ರಾಹಿಂ ಹನೀಫ್ ಬುಶ್ರಾ ,ಪತ್ತುಚ್ಚ ಕರಾವಳಿ ,ಅಬ್ದುಲ್ ಗಫಾರ್ ನಾವೂರು , ಅಬ್ದುಲ್ ಶುಕೂರ್ ಕೆ. ಯಚ್ ,ಜಮಾಅತ್ ಕೊಶಾದಿಕಾರಿ ಯಸ್ . ಎಂ ಅಬ್ದುಲ್ ಹಮೀದ್ ನಾವೂರು ,ಅಬ್ದುಲ್ ಖಾದರ್ ಯಂ.ಟಿ ,ಅಬೂಬಕ್ಕರ್ ಎಸ್.ಪಿ ಅಬ್ದುಲ್ ಖಾದರ್ ಪಾರೆ, ಯಾಕೂಬ್ ಎಸ್.ಟಿ ,ಸಿದ್ದೀಕ್ ಕಟ್ಟೆಕ್ಕಾರ್ ಶರೀಫ್ ಕಂಠಿ , ರಿಯಾಝ್ ಕಟ್ಟೆಕ್ಕಾರ್ ಮತ್ತಿತರರು ಉಪಸ್ಥಿತರಿದ್ದರು.






