ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಸೋಮವಾರ ಪ್ರಕಟಿಸಿರುವ ಟಿ20 ವಿಶ್ವಕಪ್ ಐಸಿಸಿ ತಂಡದಲ್ಲಿ ಭಾರತದ ಆರು ಆಟಗಾರರು ಸ್ಥಾನ ಪಡೆದಿದ್ದಾರೆ. ಆದರೆ ವಿರಾಟ್ ಕೊಹ್ಲಿ ಅವರು ಸ್ಥಾನ ಪಡೆದಿಲ್ಲ.
ಭಾರತ ತಂಡ ಕಪ್ ಗೆಲ್ಲಲು ಮಹತ್ವದ ಕೊಡುಗೆ ನೀಡಿದ ಭಾರತದ
ನಾಯಕರಾಗಿದ್ದ ರೋಹಿತ್ ಶರ್ಮಾ, ವೇಗಿ ಜಸ್ಪ್ರೀತ್ ಬೂಮ್ರಾ, ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ಅರ್ಷದೀಪ್ ಸಿಂಗ್ ಹಾಗೂ ಸ್ಪಿನ್, ಆಲ್ರೌಂಡರ್ ಅಕ್ಷರ್ ಪಟೇಲ್ ಸ್ಥಾನ ಗಳಿಸಿದ್ಧಾರೆ. ಅಫ್ಗಾನಿಸ್ತಾನ ತಂಡದ ಮೂವರು, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ತಂಡದ ತಲಾ ಒಬ್ಬರಿಗೆ ಸ್ಥಾನ ಲಭಿಸಿದೆ.
ತಂಡ:
ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಜಸ್ಪ್ರೀತ್ ಬೂಮ್ರಾ, ಅರ್ಷದೀಪ್ ಸಿಂಗ್ (ಎಲ್ಲರೂ ಭಾರತದವರು), ರೆಹಮಾನುಲ್ಲಾ ಗುರ್ಬಾಜ್, ರಶೀದ್ ಖಾನ್, ಫಜಲ್ಹಕ್ ಫರೂಕಿ (ಅಫ್ಗಾನಿಸ್ತಾನ), ಮಾರ್ಕಸ್ ಸ್ಟೊಯಿನಿಸ್ (ಆಸ್ಟ್ರೇಲಿಯಾ), ನಿಕೊಲಸ್ ಪೂರನ್ (ವೆಸ್ಟ್ ಇಂಡೀಸ್), 12ನೇ ಆಟಗಾರ: ಎನ್ರಿಚ್ ನಾಕಿಯಾ (ದಕ್ಷಿಣ ಆಫ್ರಿಕಾ)