ಸುಳ್ಯ:ಕಳೆದ ಒಂದು ದಶಕದಿಂದ ಸುಳ್ಯದ ಜನತೆಗೆ ಸ್ವಾದಿಷ್ಟ ರುಚಿಯ ಮತ್ತು ವೈವಿಧ್ಯ ಖಾದ್ಯಗಳನ್ನು ಉಣಬಡಿಸಿ ಗ್ರಾಹಕರಿಗೆ ತೃಪ್ತಿ ನೀಡುತ್ತಿರುವ ಸುಳ್ಯ ಹಳೆಗೇಟಿನ ಹೋಟೆಲ್ ‘ಸಂತೃಪ್ತಿ’ಗೆ ಇದೀಗ ದಶಕದ ಸಂಭ್ರಮ.ಹೋಟೆಲ್ ಉದ್ಯಮದಲ್ಲಿ ಸುಮಾರು ಎರಡು ದಶಕಗಳ ಅನುಭವ ಹೊಂದಿರುವ ಸಂತೃಪ್ತಿ ಹೋಟೆಲ್ ಕಳೆದ
10 ವರ್ಷಗಳಿಂದ ಸುಳ್ಯದ ಹೋಟೆಲ್ ಉದ್ಯಮದ ಟ್ರೆಂಡಿಂಗ್ ಮತ್ತು ಸುಳ್ಯದ ಜನತೆಯ ಕ್ರೇಝ್..
ಓಣಂ ಸಂಭ್ರಮ- ಓಣಂ ಸದ್ಯ:
ಇದೀಗ ನಾಡಿಗೆ ಓಣಂ ಸಂಭ್ರಮ.ದೇಶದೆಲ್ಲೆಡೆ ಜಾತಿ, ಧರ್ಮ ಭೇದ ಇಲ್ಲದೆ ಎಲ್ಲರೂ ಆಚರಿಸುವ ಓಣಂ ನಾಡಿಗೆ ಸಂಭ್ರಮ, ಸಡಗರದ ಹಬ್ಬ. ಪ್ರತಿ ವರ್ಷವೂ ಜನರ ಸಂಭ್ರಮಕ್ಕೆ ಸಾಥ್ ನೀಡುತಿದೆ ಸುಳ್ಯದ ಜನಪ್ರಿಯ ಹೋಟೆಲ್ ಸಂತೃಪ್ತಿ. ಓಣಂ ಪ್ರಯುಕ್ತ ಎರಡು ದಿನಗಳ ಕಾಲ ಅಂದರೆ ಸೆ.16 ಮತ್ತು 17 ರಂದು ಸಂತೃಪ್ತಿಯಲ್ಲಿ ಓಣಂ ಸದ್ಯ ಉಣ ಬಡಿಸಲಿದೆ. ಮಧ್ಯಾಹ್ನ 12 ರಿಂದ 4 ಗಂಟೆಯ ತನಕ ಹೋಟೆಲ್ನಲ್ಲಿ ಓಣಂ ಸದ್ಯ ಇರಲಿದೆ.ಕಳೆದ 10 ವರ್ಷಗಳಿಂದ ಓಣಂ ಸಂದರ್ಭದಲ್ಲಿ ಸಂತೃಪ್ತಿಯಲ್ಲಿ ಓಣಂ ಸದ್ಯ ಏರ್ಪಡಿಸಲಾಗಿತ್ತು. ಸುಮಾರು 30ಕ್ಕೂ ಅಧಿಕ ವೈವಿಧ್ಯಮಯ ಊಟ ಓಣಂ ಸದ್ಯ. ಕೇರಳದ ಓಣಂ ಹಬ್ಬಕ್ಕೆ ಬಡಿಸಲಾಗುವ ಎಲ್ಲಾ ಖಾದ್ಯಗಳನ್ನೂ ಸದ್ಯದಲ್ಲಿ ಬಡಿಸಲಾಗುತ್ತದೆ. ಅನ್ನ, ಸಾಂಬಾರ್, ಪಾಯಸ, ಅವಿಯಲ್, ಕೂಟುಕರಿ, ಪುಳಿಶ್ಯೇರಿ, ವಿವಿಧ ಪಲ್ಯಗಳು, ಹಪ್ಪಳ, ಬಾಳೆ ಹಣ್ಣು, ಶರ್ಕರ ವರಟ್ಟಿ, ಚಿಪ್ಸ್..ಹೀಗೆ ಓಣಂ ಸದ್ಯದ ಎಲ್ಲಾ ಖಾದ್ಯಗಳನ್ನೂ ಬಡಿಸಲಾಗುತ್ತದೆ. ಬಾಳೆ ಎಲೆ ಹಾಕಿ ಸಾಂಪ್ರದಾಯಿಕವಾಗಿ ಸದ್ಯ ಬಡಿಸಲಾಗುತ್ತದೆ.
ಓಣಂ ಸದ್ಯ ತಯಾರಿಸಲು ವಿಶೇಷ ಪಾಕತಜ್ಞರನ್ನು ಕರೆ ತರಲಾಗುತ್ತದೆ. ಕಳೆದ 10 ವರ್ಷಗಳಿಂದಲೂ ಸುಳ್ಯದ ಸಂತೃಪ್ತಿಯಲ್ಲಿ ಓಣಂ ಸದ್ಯ ಬಡಿಸಲಾಗುತ್ತದೆ. ಓಣಂ ಸದ್ಯಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದು ಸಂತೃಪ್ತಿ ಹೋಟೆಲ್ನ ಮಾಲಕರಾದ ನವೀನ್ ಹೇಳುತ್ತಾರೆ. ಓಣಂ ಆಚರಿಸುವ ಮಂದಿ ಮಾತ್ರವಲ್ಲದೆ ಸುಳ್ಯದ ಬಹುತೇಕ ಮಂದಿ ಓಣಂ ಸದ್ಯ ಉಣ್ಣಲು ಬರುತ್ತಾರೆ. ಸುಳ್ಯ ಮಾತ್ರವಲ್ಲದೆ ದಕ್ಷಿಣ ಕನ್ನಡ, ಕಾಸರಗೋಡು, ಕೊಡಗು ಜಿಲ್ಲೆಯ ವಿವಿಧ ಭಾಗಗಳಿಂದ ಓಣಂ ಸದ್ಯ ಸವಿಯಲು ಇಲ್ಲಿಗೆ ಆಗಮಿಸುತ್ತಾರೆ.
ಈ ಬಾರಿಯೂ ವಿಶೇಷ ಓಣಂ ಸದ್ಯದೊಂದಿಗೆ ಸಂತೃಪ್ತಿ ಓಣಂ ಸಂಭ್ರಮ ಹೆಚ್ಚಿಸಲು ಸಿದ್ಧವಾಗಿದೆ. ಹೋಟೆಲ್ನಲ್ಲಿ ಓಣಂ ಸದ್ಯ ನೀಡುವುದರ ಜೊತೆಗೆ ಮುಂಚಿತವಾಗಿ ಆರ್ಡರ್ ಮಾಡಿದರೆ ಪಾರ್ಸೆಲ್ ವ್ಯವಸ್ಥೆಯೂ ಇದೆ ಎನ್ನುತ್ತಾರೆ ನವೀನ್ ಅವರು.
ವೈವಿಧ್ಯತೆ ಉಣಬಡಿಸಿದ ಸಂತೃಪ್ತಿಯ ದಶಕ:
ಸುಳ್ಯದ ಜನತೆಯ ನಾಲಗೆಗೆ ಹೊಸ ವೈವಿಧ್ಯಮಯ ಖಾದ್ಯಗಳನ್ನು ಉಣ ಬಡಿಸಿದ ಕೀರ್ತಿ ಹೋಟೆಲ್ ಸಂತೃಪ್ತಿಗೆ ಸಲ್ಲುತ್ತದೆ. ಮಲ್ಟಿ ಕುಷನ್ ಶುದ್ಧ ಸಸ್ಯಾಹಾರಿ ಹೋಟೆಲ್ ಸಂತೃಪ್ತಿಯಲ್ಲಿ ದಕ್ಷಿಣ ಭಾರತದ, ಉತ್ತರ ಭಾರತ, ಚೈನೀಸ್, ಚಾರ್ಟ್ಸ್ ಹೀಗೆ ವರೈಟಿ ಫುಡ್ಗಳ ದೊಡ್ಡ ಮೆನುವೇ ನೀಡುತ್ತಾರೆ.
ವಿಶೇಷ ಖಾದ್ಯಗಳ ಸಾಲು..ಸಾಲು
ಪನ್ನೀರ್ ಟಿಕ್ಕಾ, ಮಶ್ರೂಮ್ ಟಿಕ್ಕಾ, ಪನ್ನೀರ್ ಗೀರೋಸ್ಟ್, ಮಶ್ರೂಮ್ ಗೀರೋಸ್ಟ್, ಬೇಬಿ ಕಾರ್ನ್ ಗೋಲ್ಡನ್ ಪ್ರೈ ಹೀಗೆ ಸಂತೃಪ್ತಿಯಲ್ಲಿ ಸ್ಪೆಷಲ್ ಫುಡ್ಗಳ ದೊಡ್ಡ ಪಟ್ಟಿಯೇ ನೀಡುತ್ತಾರೆ. ಇವುಗಳಿಗೆ ಭಾರೀ ಬೇಡಿಕೆಯೂ ಇದೆ.ದಕ್ಷಿಣ ಭಾರತದ ಎಲ್ಲಾ ವಿಶೇಷ ಖಾದ್ಯಗಳು, ಎಲ್ಲಾ ತರಹದ ರುಚಿ ರುಚಿಯಾದ 25ಕ್ಕೂ ಹೆಚ್ಚು ವರೈಟಿ ದೋಸಾ ಐಟಂಗಳು, ಸಲಾಡ್, ಸೌತ್ ಮೀಲ್ಸ್, ವಿವಿಧ ಸೂಪ್ಗಳು,
ಚೈನೀಸ್ ಸ್ಪೆಷಲ್ನಲ್ಲಿ ವಿವಿಧ ತರಹದ ಮಂಚೂರಿ, ಚಿಲ್ಲಿ ಸೇರಿದಂತೆ ಗೋಬಿ ಐಟಂಗಳು, ಮಂಚೂರಿ, ಚಿಲ್ಲಿ ಪೆಪ್ಪರ್ ಡ್ರೈ ಬೇಬಿ ಕಾರ್ನ್, ಮಶ್ರೂಮ್ , ಪನ್ನೀರ್ ಫುಡ್ಗಳ ಅಪೂರ್ವ ವರೈಟಿ ಇಲ್ಲಿದೆ. ಗೋಬಿ, ಪನ್ನೀರ್, ಮಶ್ರೂಮ್ ಕಡೈ ಸ್ಪೆಷಲ್ ಐಟಂಗಳು ಇಲ್ಲಿನ ವಿಶೇಷತೆ. ಎಲ್ಲಾ ಉತ್ತರ ಭಾರತದ ಸ್ಪೆಷಲ್ ಫುಡ್ಗಳು ಲಭ್ಯವಿದೆ. ದಾಲ್, ವಿವಿಧ ವೆಜ್ ಕರಿಗಳು, ಮಸಾಲ ಕರಿಗಳು,
ಉತ್ತರ ಭಾರತದ ವಿಶೇಷ ಖಾದ್ಯಗಳಾದ ಪನ್ನೀರ್ ಬುರ್ಜಿ, ಮಶ್ರೂಮ್ ಮಸಾಲ, ಮಶ್ರೂಮ್ ಪಾಲಕ್, ಆಲೂ ಗೋಬಿ, ಆಲೂ ಕ್ಯಾಪ್ಸಿಕಂ, ಆಲೂ ಮಟ್ಟರ್, ಆಲೂ ಪಾಲಕ್, ಪನ್ನೀರ್ ಕೋಪ್ತಾ, ಪನ್ನೀರ್ ಪಸಂದಾ, ಸಂತೃಪ್ತಿ ಸ್ಪೆಷಲ್ ಕರಿ ಸೇರಿ ವೈವಿಧ್ಯಮಯ ಖಾದ್ಯಗಳು ಇಲ್ಲಿ ಲಭ್ಯವಿದೆ. ವಿವಿಧ ತಂದೂರಿ ರೊಟ್ಟಿಗಳು, ವೈವಿಧ್ಯಮಯ ರೈಸ್ಗಳು, ಬಿರಿಯಾಣಿಗಳು, ವೆಜ್, ಪನ್ನೀರ್, ಮಶ್ರೂಮ್ ಸೇರಿದಂತೆ ನೂಡಲ್ಸ್ಗಳು, ಹಲ್ವಾ, ಜಾಮೂನ್ ಸೇರಿ ಸಿಹಿಗಳು, ವಿವಿಧ ಐಸ್ ಕ್ರೀಮ್ಗಳು, ಎಲ್ಲಾ ತರಹದ ಜ್ಯೂಸ್ಗಳು, ಮಿಲ್ಕ್ ಶೇಕ್, ಪ್ರೆಶ್ ಜ್ಯೂಸ್ಗಳು ಇಲ್ಲಿ ಲಭ್ಯ.
ಸ್ಪೆಷಲ್ ಚಾಟ್ ಕೌಂಟರ್:
ಎಲ್ಲಾ ತರಹದ ಚಾಟ್ಸ್ಗಳು ಸಂತೃಪ್ತಿ ಹೋಟೆಲ್ನಲ್ಲಿ ಲಭ್ಯ. ಚಾಟ್ಸ್ಗಾಗಿ ಪ್ರತ್ಯೇಕ ಕೌಂಟರ್ ಇದೆ. ರುಚಿಕರವಾದ ಮಸಾಲ ಪೂರಿ, ಪಾನಿ ಪೂರಿ, ಸೇವ್ ಪೂರಿ, ದಾಯ್ ಪೂರಿ, ಭೇಲ್ ಪೂರಿ, ದಾಯ್ ಭೇಲ್, ಪಾವ್ ಬಾಜಿ, ಎಕ್ಸ್ಟ್ರಾ ಪಾವ್, ಅಮೇರಿಕಲ್ ಸ್ವೀಟ್ ಕಾರ್ನ್ ಹೀಗೆ ಇಲ್ಲಿನ
ಚಾರ್ಟ್ಸ್ಗಳ ಗಮ ಗಮ ಪರಿಮಳವೇ ಬಾಯಲ್ಲಿ ನೀರೂರಿಸುತ್ತದೆ. ಸವಿದರಂತೂ ರುಚಿಯ ಹೊಸ ಲೋಕವೇ ತೆರೆದುಕೊಳ್ಳುತ್ತದೆ. ಇಲ್ಲಿನ ಐಸ್ ಕ್ರೀಂಗಳಂತೂ ನಾಲಗೆಗೆ ಭಿನ್ನ ರುಚಿ, ವೈವಿಧ್ಯಮಯ ಸಿಹಿಯನ್ನು ನೀಡುತ್ತದೆ. ಸಿಝಲಿಂಗ್ ಬ್ರೌನಿ, ಪ್ರೂಟ್ ಸಲಾಡ್ ಐಸ್ ಕ್ರೀಂ, ಡ್ರೈಪ್ರೂಟ್ ಸಲಾಡ್ , ಗಡ್ ಬಡ್ ಸ್ಪೆಷಲ್, ಜೆಲ್ಲಿ ಐಸ್ ಕ್ರೀಂ, ಹನಿಮೂನ್ ಸ್ಪೆಷಲ್, ಸಂತೃಪ್ತಿ ಸ್ಪೆಷಲ್ ಐಸ್ ಕ್ರೀಂ, ಸೂಪ್, ಸ್ಲಾಬ್, ನಟ್ಸ್ ಐಸ್ಕ್ರೀಂಗಳು ಸಮ್ ತಿಂಗ್ ಸ್ಪೆಷಲ್ ಅನುಭವ ನೀಡುತಿದೆ.
ಒಟ್ಟಿನಲ್ಲಿ ಸಂತೃಪ್ತಿ ಹೋಟೆಲ್ನಲ್ಲಿ ಆಹಾರ ಸೇವಿಸಿದವರು ಪೂರ್ಣ ತೃಪ್ತಿಯಿಂದ ಹೊರ ಬರುತ್ತಾರೆ…ಅದುವೇ ನಮ್ಮ ಸಂತೃಪ್ತಿ ಎನ್ನುತ್ತಾರೆ ಸಂತೃಪ್ತಿಯ ಮಾಲಕರಾದ ನವೀನ್. ಹೆಚ್ಚಿನ ಮಾಹಿತಿಗಾಗಿ ಭೇಟಿ ಕೊಡಿ