ಸುಳ್ಯ:ಅಡಿಕೆ ಬೆಳೆಗೆ ಬಾದಿಸುವ ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಬಳಸುವ ರೋಗ ನಾಶಕಗಳಾದ ಪ್ರೋಪಿಕೋನಜಾಲ್, ಟ್ಯುಬಿಕೊನಾಜಾಲ್, ಪ್ರೋಪಿನೆಬ್, ಕಾರ್ಬನ್ ಡೈಜಿಮ್ + ಮ್ಯಾಂಕೇಜೆಬ್, ಕಾಪರ್ ಸಲ್ಪೇಟ್ (ಮೈಲು ತುತ್ತು) ಖರೀದಿಗೆ ಶೇಕಡಾ 30 ರಂತೆ ಪ್ರತೀ ಎಕರೆಗೆ ರೂ. 600 ಸಹಾಯಧನ ಲಭ್ಯವಿದೆ. ಪ್ರತಿ ರೈತರಿಗೆ 5 ಎಕರೆಗೆ ಗರಿಷ್ಟ 3000 ಸಹಾಯಧನ ನೀಡಲಾಗುವುದು. ರೈತರು ಅರ್ಜಿಯೊಂದಿಗೆ
ಅಧಿಕೃತ ಕೀಟನಾಶಕ ಮಾರಾಟ ಪರವಾನಿಗೆ ಇರುವ ಮಾರಾಟಗಾರರಿಂದ ಮೇಲಿನ ಸಸ್ಯ ಸಂರಕ್ಷಣಾ ಔಷಧಿ ಖರೀದಿಸಿ, ಜಿ.ಎಸ್.ಟಿ. ಬಿಲ್ಲು, ಪಹಣಿ ಪತ್ರ (RTC) ಆರ್.ಟಿ.ಸಿ. ಜಂಟಿ ಖಾತೆ ಹೊಂದಿದ್ದಲ್ಲಿ, ಉಳಿಕೆದಾರರಿಂದ ಒಪ್ಪಿಗೆ / ಜಿ.ಪಿ.ಎ. ಪತ್ರ , ಆಧಾರ್ ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ದಿನಾಂಕ: 30-05-2025 ರೊಳಗೆ ತೋಟಗಾರಿಕೆ ಇಲಾಖೆಗೆ ಸಲ್ಲಿಸಲು ಕೋರಲಾಗಿದೆ.
2025-26 ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೊಜನೆಯಡಿ ಕಾಳುಮೆಣಸು, ಜಾಯಿಕಾಯಿ, ಗೇರು, ಕೊಕ್ಕೋ, ಅಂಗಾಂಶ ಬಾಳೆ, ಡ್ರ್ಯಾಗನ್ ಫ್ರೂಟ್, ರಾಂಬೂಟನ್ ಬೆಳೆಗಳಲ್ಲಿ ಹೊಸದಾಗಿ ಪ್ರದೇಶ ವಿಸ್ತರಣೆ ಹಾಗೂ ಕೃಷಿ ಹೊಂಡ ನಿರ್ಮಾಣಕ್ಕೆ ಸಹಾಯಧನ ಗುರಿಯಿರುತ್ತದೆ.
2025-26 ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಜಿಲ್ಲಾ ವಲಯ ಜೇನು ಸಾಕಾಣಿಕೆ ಯೋಜನೆಯಡಿ ಜೇನುಕೃಷಿ ತರಬೇತಿ ಕಾರ್ಯಕ್ರಮಕ್ಕೆ ಹೆಸರು ನೋಂದಾಯಿಸಲು ಅರ್ಜಿ ಆಹ್ವಾನಿಸಲಾಗಿದ್ದು ಆಸಕ್ತ ರೈತರು ದಿನಾಂಕ: 30/05/2025 ರೊಳಗಾಗಿ ತೋಟಗಾರಿಕೆ ಇಲಾಖೆ ಸುಳ್ಯ ಕಚೇರಿಯಲ್ಲಿ ಹೆಸರು ನೋಂದಾಯಿಸಲು ಕೋರಿದೆ.
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ನೀರು ಸಂಗ್ರಹಣ ಘಟಕ , ಕ್ಷೇತ್ರ ಮಟ್ಟದಲ್ಲಿ ವಿಂಗಡಣೆ, ಪ್ಯಾಕಿಂಗ್ ಮತ್ತು ಸಂಗ್ರಹಣೆ ಘಟಕ (Farm gate) ನಿರ್ಮಾಣಕ್ಕೆ ಹಾಗೂ ಸೋಲಾರ್ ಪಂಪ್ ಸೆಟ್ ಖರೀದಿಗೆ ಸಹಾಯಧನ ಗುರಿಯಿರುತ್ತದೆ.
2025-26 ನೇ ಸಾಲಿನ ಕೇಂದ್ರ ಪುರಸ್ಕೃತ ರಾಷ್ಟ್ರೀಯ ಖಾದ್ಯ ತೈಲಗಳ ಅಭಿಯಾನ ತಾಳೆ ಬೆಳೆ ಯೋಜನೆಯಡಿ ತಾಳೆ ಬೆಳೆ ಪ್ರದೇಶ ವಿಸ್ತರಣೆ ಕಾರ್ಯಕ್ರಮಕ್ಕೆ 115 ಹೆ. ತಾಲೂಕಿಗೆ ಸಹಾಯಧನದ ಗುರಿಯಿರುತ್ತದೆ ಹಾಗೂ ಕನಿಷ್ಟ 2 ಹೆಕ್ಟೇರ್ ಪ್ರದೇಶದಲ್ಲಿ ತಾಳೆ ಬೇಸಾಯವನ್ನು ಕೈಗೊಂಡಿರುವ ರೈತರಿಗೆ ಡೀಸೆಲ್ ಪಂಪ್ ಸೆಟ್ ಖರೀದಿಗೆ ಸಹಾಯಧನದ ಗುರಿಯಿರುತ್ತದೆ,ಕನಿಷ್ಟ ಒಂದು ಎಕರೆ ಇಳುವರಿ ನೀಡುತ್ತಿರುವ ತಾಳೆ ತೋಟದಲ್ಲಿ ಕೊಳವೆ ಬಾವಿ ಕೊರೆಸಲು ಸಹಾಯಧನ, ತಾಳೆ ಹಣ್ಣಗಳನ್ನು ಕಟಾವು ಮಾಡುವ ಉಪಕರಣ ಕೊಳ್ಳಲು ಸಹಾಯಧನ, ತಾಳೆ ಹಣ್ಣುಗಳನ್ನು ಕಟಾವು ಏಣಿ ಖರೀದಿಗೆ ಸಹಾಯಧನ, ಚಾಫ್ ಕಟ್ಟರ್ ಖರೀದಿಗೆ ಸಹಾಯಧನ ಗುರಿಯಿರುತ್ತದೆ.
ಮೇಲೆ ತಿಳಿಸಿದ ಕಾರ್ಯಕ್ರಮಗಳಿಗೆ ಆಸಕ್ತವುಳ್ಳ ರೈತರು ದಿನಾಂಕ 30-05-2025 ರೊಳಗೆ ನಿಗದಿತ ನಮೂನೆಯ ಅರ್ಜಿಯೊಂದಿಗೆ FID ಸಂಖ್ಯೆ, RTC (ಪಹಣಿ ಪತ್ರ) ಆರ್.ಟಿ.ಸಿ. ಜಂಟಿ ಖಾತೆ ಹೊಂದಿದ್ದಲ್ಲಿ, ಉಳಿಕೆದಾರರಿಂದ ಒಪ್ಪಿಗೆ / ಜಿ.ಪಿ.ಎ. ಪತ್ರ, ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತರಿಗೆ) ಚಾಲ್ತಿಯಲ್ಲಿರುವ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿಯನ್ನು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗೆ ಸಲ್ಲಿಸುವುದು ಎಂದು ಪ್ರಕಟಣೆ ತಿಳಿಸಿದೆ





