ಪ್ಯಾರಿಸ್: ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಪುರುಷರ ಹಾಕಿ ತಂಡವು ಕಂಚಿನ ಪದಕ ಜಯಿಸಿದೆ.ಇಂದು ನಡೆದ ಕಂಚಿನ ಪದಕಕ್ಕಾಗಿನ ಪಂದ್ಯದಲ್ಲಿ ಭಾರತ ತಂಡವು ಸ್ಪೇನ್ ವಿರುದ್ಧ 2-1 ಗೋಲುಗಳ ಅಂತರದ ಗೆಲುವು ದಾಖಲಿಸಿತು. ಭಾರತದ ಪರ ಎರಡೂ ಗೋಲು ದಾಖಲಿಸಿದ
ನಾಯಕ ಹರ್ಮನ್ಪ್ರೀತ್ ಸಿಂಗ್ ಗೆಲುವಿನ ರೂವಾರಿಯೆನಿಸಿದರು.
ಇದರೊಂದಿಗೆ ಹಾಕಿ ದಿಗ್ಗಜ ಗೋಲ್ಕೀಪರ್ ಪಿ.ಆರ್. ಶ್ರೀಜೇಶ್ ಅವರು ಗೆಲುವಿನೊಂದಿಗೆ ವಿದಾಯ ಸಲ್ಲಿಸಿದ್ದಾರೆ.ಮೂರು ವರ್ಷಗಳ ಹಿಂದೆ ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾರತ ಕಂಚಿನ ಕದಕ ಜಯಿಸಿತ್ತು. ಈಗ ಟೊಕಿಯೊದ ಸಾಧನೆಯನ್ನು ಮತ್ತೆ ಪುನರಾವರ್ತಿಸಿದೆ.
ಸೆಮಿಫೈನಲ್ನಲ್ಲಿ ಹರ್ಮನ್ಪ್ರೀತ್ ಸಿಂಗ್ ನಾಯಕತ್ವದ ಭಾರತ ತಂಡವು ಜರ್ಮನಿಯ ವಿರುದ್ಧ ಸೋಲನುಭವಿಸಿತ್ತು. ಇದರೊಂದಿಗೆ 44 ವರ್ಷಗಳ ನಂತರ ಫೈನಲ್ ತಲುಪುವ ಭಾರತದ ಕನಸು ಈ ಒಲಿಂಪಿಕ್ ಕೂಟದಲ್ಲಿಯೂ ಈಡೇರಲಿಲ್ಲ.ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಪುರುಷರ ಹಾಕಿ ತಂಡವು ಈವರೆಗೆ ಎಂಟು ಸಲ ಚಿನ್ನದ ಪದಕವನ್ನು ಜಯಿಸಿದೆ.