ಬೆಳ್ಳಾರೆ:ಬೆಳ್ಳಾರೆ ಝಕರಿಯಾ ಜುಮ್ಮಾ ಮಸ್ಜಿದ್ ಆಡಳಿತದ ಅಧೀನದಲ್ಲಿರುವ ಹಿದಾಯ ಎಜುಕೇಷನಲ್ & ಚಾರಿಟೇಬಲ್ ಟ್ರಸ್ಟ್ ಪ್ರವರ್ತಿತ ಹಿದಾಯ ಪಬ್ಲಿಕ್ ಸ್ಕೂಲ್ನ ವಾರ್ಷಿಕೋತ್ಸವದ ಅಂಗವಾಗಿ ಬ್ಲಾಸಂ ಟ್ಯಾಲೆಂಟ್ ಮತ್ತು ಪ್ರತಿಭಾ ಪುರಸ್ಕಾರ ಬೆಳ್ಳಾರೆಯಲ್ಲಿರುವ ಶಾಲಾ ವಠಾರದಲ್ಲಿ ಜರಗಿತು.ಬೆಳ್ಳಾರೆ ಝಕರಿಯಾ ಜುಮ್ಮಾ ಮಸ್ಜಿದ್ ಅಧ್ಯಕ್ಷ ಹಾಜಿ ಯು. ಎಚ್. ಅಬೂಬಕ್ಕರ್ ಮಂಗಳ ಅಧ್ಯಕ್ಷತೆ ವಹಿಸಿದ್ದರು
ಸಮಾರಂಭವನ್ನು
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿದರು.
ಸಂಪನ್ಮೂಲಗ ವ್ಯಕ್ತಿಯಾಗಿ ಜೇಸಿ ರಾಜ್ಯ ತರಬೇತುದಾರ ಪ್ರದೀಪ್ ಕುಮಾರ್ ಪನ್ನೆ ಭಾಗವಹಿಸಿದ್ದರು. ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳಿಗೆ ಮಾಜಿ ಜಿ. ಪಂ. ಸದಸ್ಯ ಎಂ. ಎಸ್. ಮಹಮ್ಮದ್ ಬಹುಮಾನ ವಿತರಿಸಿದರು.
ಮುಖ್ಯ ಅತಿಥಿಗಳಾಗಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಜಿ.ಕೃಷ್ಣಪ್ಪ,ಮೀಫ್ ಉಪಾಧ್ಯಕ್ಷ ಕೆ. ಎಂ. ಮುಸ್ತಫ, ಸುಳ್ಯ ನಗರ ಪಂಚಾಯತ್ ಸದಸ್ಯ ಕೆ. ಎಂ. ಮುಸ್ತಫ, ಉದ್ಯಮಿ ಮಮ್ಮಾಲಿ ಹಾಜಿ ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ನಮಿತಾ ರೈ, ಬೆಳ್ಳಾರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಅನಿಲ್ ರೈ ಮೊದಲಾದವರು ಭಾಗವಹಿಸಿದ್ದರು.
ವೇದಿಕೆಯಲ್ಲಿ ಝಕರಿಯಾ ಜುಮ್ಮಾ ಮಸ್ಜಿದ್ ಉಪಾಧ್ಯಕ್ಷ ಅಬ್ದುಲ್ ಖಾದರ್ ಬಯಂಬಾಡಿ, ಶಾಲಾ ಸಂಚಾಲಕ ಬಶೀರ್, ನಿರ್ದೇಶಕರುಗಳಾದ ಶಾಫಿ ಎಂ. ಎ , ಬಶೀರ್ ಕಲ್ಪಣೆ,ಯು. ಪಿ. ಬಶೀರ್, ಕೆ.ಎ.ಬಶೀರ್, ಅಝರುದ್ದೀನ್, ಪಿ. ಟಿ. ಎ. ಅಧ್ಯಕ್ಷ ಅಬ್ದುಲ್ ರೆಹಮಾನ್ ಟಿ,ಮೊದಲಾದವರು ಉಪಸ್ಥಿತರಿದ್ದರು. ಹನಿಯ್ಯಾ ಹಕೀಮ್ ಪ್ರಾರ್ಥನೆ ಗೈದರು ವಿದ್ಯಾರ್ಥಿನಿ ಶಾನಿಬ ಸ್ವಾಗತಿಸಿದರು
ಶಾಲಾ ಮುಖ್ಯ ಶಿಕ್ಷಕಿ ಸುನೈಬ ವಾರ್ಷಿಕ ವರದಿಯನ್ನು ವಾಚಿಸಿದರು









