ಬೆಳ್ಳಾರೆ: ಬೆಳ್ಳಾರೆಯ ಹಿದಾಯ ಪಬ್ಲಿಕ್ ಸ್ಕೂಲ್ನಲ್ಲಿ ಮಕ್ಕಳ ದಿನಾಚರಣೆ ನಡೆಯಿತು. ಸ್ವತಂತ್ರ ಭಾರತದ ಮೊದಲ ಪ್ರಧಾನ ಮಂತ್ರಿ ಪ್ರೀತಿಯ ಚಾಚಾ ನೆಹರು ಅವರ ಬಗ್ಗೆ ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ
ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ರಹಮಾನ್, ಶಾಲಾ ನಿರ್ದೇಶಕರಾದ ಕಲಂದರ್ ಶಾಫಿ, ಶಾಲಾ ಮುಖ್ಯ ಗುರು ಸುನೈನಾ ಬಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ಬಶೀರ್ ಬಿ.ಎ ವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಮನೋರಂಜನ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು ಮತ್ತು ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು. ವೇದಿಕೆಯಲ್ಲಿ ನಿರ್ದೇಶಕರಾದ ಬಶೀರ್ ಕಲ್ಲಪ್ಪನೆ ಉಪಸ್ಥಿತರಿದ್ದರು ಶಾಲಾ ವಿದ್ಯಾರ್ಥಿ ನಾಯಕನಾದ ಅಹಮದ್ ಮುಫೀದ್ ಸ್ವಾಗತಿಸಿ. ಶಿಕ್ಷಕಿ ಸಫ್ರಿನ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಸೆಕೀನಾ ವಂದಿಸಿದರು.









